Select Your Language

Notifications

webdunia
webdunia
webdunia
webdunia

ಬುರ್ಖಾ ತೆಗೆದು ಬ್ಲ್ಯಾಕ್ ಮ್ಯಾಜಿಕ್ ;ಚಿನ್ನದ ಅಂಗಡಿ ಮಾಲಿಕರಿಗೆ ಮೋಸ

webdunia
ಬೆಂಗಳೂರು , ಗುರುವಾರ, 15 ಸೆಪ್ಟಂಬರ್ 2022 (17:25 IST)
ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು ಜ್ಯೂವೆಲರಿ ಶಾಪ್ ಮಾಲೀಕರೊಬ್ಬರ ಮೇಲೆ‌ ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡಿ 85 ಸಾವಿರ ರೂಪಾಯಿ ಹಣ ದೋಚಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಯಲಹಂಕದ ಅಟ್ಟೂರು ಲೇಔಟ್ ಜ್ಯುವೆಲರಿ ಶಾಪ್​ನಲ್ಲಿ ಈ ಘಟನೆ ನಡೆದಿದೆ.
 
ನಕಲಿ ಬಂಗಾರದ‌ ಆಭರಣ ತಂದು ಕೈಚಳಕ ತೋರಿದ್ದಾಳೆ. ಈಕೆ ಬುರ್ಖಾ ತೆಗೆದು ಮುಖ‌ ತೋರಿಸುತ್ತಿದ್ದಂತೆಯೇ ಅಂಗಡಿ ಮಾಲೀಕ ಪ್ರಜ್ಞೆ ತಪ್ಪಿದ್ದಾರೆ. ನಂತರ ಆಕೆ ಹೇಳಿದಂತೆ ಸಾವಿರಾರು ರೂಪಾಯಿ ಹಣ ಕೊಟ್ಟಿದ್ದಾರೆ!
 
ಮಹಿಳೆ ಬ್ಲ್ಯಾಕ್ ಮ್ಯಾಜಿಕ್​ನ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಅಂಗಡಿಯಿಂದ‌ ಹೊರ‌ ಹೋಗ್ತಿದ್ದಂತೆ ಎಚ್ಚರಗೊಂಡ ಅಂಗಡಿ ಮಾಲೀಕನಿಗೆ ಆಗಲೇ ತಾವು ಮೋಸ ಹೋಗಿರುವುದು ತಿಳಿದಿದೆ.
 
ಇದೇ ರೀತಿ‌ ಯಲಹಂಕ ಆರ್.ಟಿ ನಗರ ಸೇರಿದಂತೆ ಹಲವೆಡೆ ಮಹಿಳೆ ವಂಚನೆ ಮಾಡಿರುವುದು ತಿಳಿದುಬಂದಿದೆ. ಮುಖ‌ ತೋರಿಸಿ ಕೈ ಮುಟ್ಟುತ್ತಿದ್ದಂತೆಯೇ ಅಂಗಡಿಯವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ನಂತರ ಆಕೆ ಹೇಳಿದಂತೆ ಹಣ, ಒಡವೆ ಕೊಡುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಚಿನ್ನದಂಗಡಿಯ ಮಾಲೀಕರಿಗೆ ಆತಂಕ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲಿನಲ್ಲಿ ತುರ್ತು ಹೆರಿಗೆ ಸಹಾಯ ಮಾಡಿದ ಮೆಡಿಕಲ್ ವಿದ್ಯಾರ್ಥಿ;ಶಹಭಾಷ್