Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ರದ್ದು ಕೊಲೆಯಾಗಿತ್ತು! ಅಮೀರ್ ಖಾನ್ ಸಹೋದರನ ಶಾಕಿಂಗ್ ಹೇಳಿಕೆ

ಸುಶಾಂತ್ ಸಿಂಗ್ ರದ್ದು ಕೊಲೆಯಾಗಿತ್ತು! ಅಮೀರ್ ಖಾನ್ ಸಹೋದರನ ಶಾಕಿಂಗ್ ಹೇಳಿಕೆ
ಮುಂಬೈ , ಶನಿವಾರ, 17 ಸೆಪ್ಟಂಬರ್ 2022 (10:49 IST)
ಮುಂಬೈ: ಬಾಲಿವುಡ್ ಯುವ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಆಕ್ರೋಶ ಈಗಲೂ ಅಭಿಮಾನಿಗಳಲ್ಲಿದೆ. ಡ್ರಗ್ ಮಾಫಿಯಾಗೆ ಸಿಲುಕಿ ಸುಶಾಂತ್ ಸಾವನ್ನಪ್ಪಿದರು ಎಂದು ಕೆಲವರು ಈಗಲೂ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ.

2020 ರಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ಹಿಂದೆ ಡ್ರಗ್ ಮಾಫಿಯಾ ಇದೆ ಎಂದು ಆರೋಪಗಳಿತ್ತು. ಈ ಬಗ್ಗೆ ತನಿಖೆಗಳೂ ನಡೆದಿತ್ತು.

ಇದೀಗ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಸುಶಾಂತ್ ಸಿಂಗ್ ರದ್ದು ವ್ಯವಸ್ಥಿತ ಕೊಲೆಯಾಗಿತ್ತು ಎಂದು ಹೇಳಿದ್ದಾರೆ. ಸುಶಾಂತ್ ರದ್ದು ಕೊಲೆಯಾಗಿತ್ತು ಎಂದು ನನಗೆ ಗೊತ್ತು. ಅದರ ಬಗ್ಗೆ ತನಿಖೆಗಳು ನಡೆಯುತ್ತಿವೆ. ಸತ್ಯ ಹೊರ ಬಂದೇ ಬರುತ್ತದೆ ಎಂದು ನನಗೆ ನಂಬಿಕೆಯಿದೆ ಎಂದು ಫೈಸಲ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಜ ಟೀಸರ್ ಲಾಂಚ್ ಗೆ ಬರಲಿರುವ ತೆಲುಗು ಸ್ಟಾರ್ ನಟ