ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟೀಸರ್ ಲಾಂಚ್ ಗೆ ಇಂದು ತೆಲುಗಿನ ಸ್ಟಾರ್ ನಟರೊಬ್ಬರು ಅತಿಥಿಯಾಗಿ ಆಗಮಿಸಲಿದ್ದಾರೆ.
ಕಬ್ಜ ಟೀಸರ್ ಲಾಂಚ್ ಕಾರ್ಯಕ್ರಮ ಇಂದು ಸಂಜೆ ಅದ್ಧೂರಿಯಾಗಿ ನಡೆಯಲಿದೆ. ನಾಳೆ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ ನಿಮಿತ್ತ ಇಂದು ಟೀಸರ್ ಲಾಂಚ್ ಮಾಡಲಾಗುತ್ತಿದೆ.
ಟೀಸರ್ ಲಾಂಚ್ ಗೆ ತೆಲುಗು ಸ್ಟಾರ್ ನಟರೊಬ್ಬರು ಬರಲಿದ್ದಾರೆ ಎಂದಷ್ಟೇ ಚಿತ್ರತಂಡ ಮಾಹಿತಿ ನೀಡಿದೆ. ಆದರೆ ಈಗಾಗಲೇ ಅಭಿಮಾನಿಗಳು ರಾಮ್ ಚರಣ್ ತೇಜ್ ಅಥವಾ ರಾಣಾ ದಗ್ಗುಬಟ್ಟಿ ಇರಬಹುದು ಎಂದು ಗೆಸ್ ಮಾಡಿದ್ದಾರೆ.