Publish Date: Sat, 17 Sep 2022 (08:10 IST)
Updated Date: Sat, 17 Sep 2022 (08:48 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಟೀಸರ್ ಇಂದು ರಿಲೀಸ್ ಆಗಲಿದೆ.
ನಾಳೆ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಅಂಗವಾಗಿ ಕಬ್ಜ ಟೀಸರ್ ಇಂದು ಸಂಜೆ ಲಾಂಚ್ ಆಗುತ್ತಿದೆ. ಇಂದು ಸಂಜೆ 5.04 ಕ್ಕೆ ಟೀಸರ್ ಲಾಂಚ್ ಆಗುತ್ತಿದೆ. ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಲಾಂಚ್ ಆಗಲಿದೆ.
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಶ್ರಿಯಾ ಸರಣ್ ನಾಯಕಿಯಾಗಿ ಅಭಿನಯಿಸಿದ್ದಾರೆ.