Publish Date: Wed, 14 Sep 2022 (16:25 IST)
Updated Date: Wed, 14 Sep 2022 (16:27 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟರಾದ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅವರಿಗೆ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ 10 ನೇ ಘಟಿಕೋತ್ಸವ ಸಮಾರಂಭ ಇಂದು ಸುವರ್ಣಸೌದದ ಸಭಾಭವನದಲ್ಲಿ ನಡೆದಿದ್ದು, ಇಬ್ಬರೂ ಸ್ಯಾಂಡಲ್ ವುಡ್ ನಟರಿಗೆ ಗೌರವ ಸಮರ್ಪಿಸಲಾಯಿತು.
ರಮೇಶ್ ಅರವಿಂದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಡಾಕ್ಟರೇಟ್ ಗೌರವ ಪಡೆದುಕೊಂಡರು. ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಡಾಕ್ಟರೇಟ್ ಪ್ರಧಾನ ಮಾಡಿದರು.