Publish Date: Sun, 27 Dec 2020 (09:45 IST)
Updated Date: Sun, 27 Dec 2020 (09:47 IST)
ಅಹಮ್ಮದಾಬಾದ್: ಇನ್ ಸ್ಟಾಗ್ರಾಂನಲ್ಲಿ ಪರಿಚಿತಳಾದ ಯುವತಿಗೆ ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡಿ ಯುವಕನೊಬ್ಬ ಆಕೆಯನ್ನು ಮಾನಭಂಗ ಮಾಡಿದ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.
ಕಳೆದ ವರ್ಷ 20 ವರ್ಷದ ಯುವಕ ಇನ್ ಸ್ಟಾಗ್ರಾಂನಲ್ಲಿ 22 ವರ್ಷದ ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದಾದ ಬಳಿಕ ಇಬ್ಬರೂ ಚ್ಯಾಟಿಂಗ್ ಮಾಡುತ್ತಿದ್ದರು. ಕೆಲವು ದಿನಗಳಿಂದ ಯುವಕ ಭಾವನಾತ್ಮಕವಾಗಿ ಬೆದರಿಕೆ ಹಾಕಲು ಶುರು ಮಾಡಿದ್ದ. ಕೈ ಕತ್ತರಿಸಿದ ಫೋಟೋ ಹಾಕಿ ನೀನು ನನ್ನನ್ನು ಭೇಟಿ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಯುವತಿ ಆತನನ್ನು ಅಹಮ್ಮದಾಬಾದ್ ನಲ್ಲಿ ಭೇಟಿಯಾಗಲು ಒಪ್ಪಿದ್ದಳು. ಅದರಂತೆ ಆತ ಹೋಟೆಲ್ ಒಂದಕ್ಕೆ ಕರೆದೊಯ್ದು ಎರಡು ದಿನಗಳ ಕಾಲ ನಿರಂತರವಾಗಿ ಮಾನಭಂಗ ಮಾಡಿದ್ದ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಯುವಕ ತಲೆಮರೆಸಿಕೊಂಡಿದ್ದಾನೆ.