Publish Date: Sat, 26 Dec 2020 (12:08 IST)
Updated Date: Sat, 26 Dec 2020 (12:10 IST)
ಕೋಲಾರ : ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಿದವ ರೈತರ ಬಗ್ಗೆ ಕೋಲಾರದ ಸಂಸದ ಮುನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಿದವರು ರೈತರಲ್ಲ ದಲ್ಲಾಳಿಗಳು. ಪಂಜಾಬ್ ಅಕ್ಕಪಕ್ಕದ ರಾಜ್ಯಗಳ ದಲ್ಲಾಳಿಗಳು ಧರಣಿ ನಡೆಸಿದ್ದಾರೆ. ತಿದ್ದುಪಡಿಯಿಂದ ದಲ್ಲಾಳಿಗಳಿಗೆ ನಷ್ಟವಾಗ್ತಿದೆ ಎಂದು ಅವರು ಧರಣಿ ಮಾಡಿದ್ದಾರೆ. ರೈತರ ಹೆಸರಿನಲ್ಲಿ ದಲ್ಲಾಳಿ ಪ್ರತಿಭಟನೆ ನಡೆಸ್ತಿದ್ದಾರೆ ಅಷ್ಟೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.