Publish Date: Fri, 25 Dec 2020 (09:38 IST)
Updated Date: Fri, 25 Dec 2020 (09:40 IST)
ಲಕ್ನೋ: ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ಪ್ರಚೋದಿಸಿದ ಆರೋಪದಲ್ಲಿ ಆಕೆಯ ಸಂಬಂಧಿಯನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತಮ್ಮ ಮಗಳನ್ನು ಸಂಬಂಧಿ ಮಹಿಳೆ ಜೊತೆಗೆ ಕರೆದೊಯ್ದು ವೇಶ್ಯಾವಾಟಿಕೆ ತಳ್ಳಲು ಬಲವಂತ ಮಾಡುತ್ತಿದ್ದಾಳೆ ಎಂದು ಕುಟುಂಬಸ್ಥರು ಮಹಿಳಾ ಆಯೋಗಕ್ಕೆ ದೂರವಾಣಿ ಮೂಲಕ ದೂರು ನೀಡಿದ್ದರು. ಈ ಸಂಬಂಧ ಮಹಿಳಾ ಆಯೋಗ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆ ಕಾರ್ಯಾಚಾರಣೆ ನಡೆಸಿದ ಪೊಲೀಸರು ತಕ್ಕ ಸಮಯದಲ್ಲೇ ಬಾಲಕಿಯನ್ನು ರಕ್ಷಿಸಿದ್ದಾರೆ.