Publish Date: Fri, 25 Dec 2020 (10:21 IST)
Updated Date: Fri, 25 Dec 2020 (10:23 IST)
ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ವಾಹನ ದಟ್ಟಣೆಯಿಂದಾಗಿ ವಾಯು ಮಾಲಿನ್ಯ ಕುರಿತಂತೆ ಐದು ತಿಂಗಳ ಮಗುವೊಂದು ಹೈಕೋರ್ಟ್ ಮೆಟ್ಟಿಲೇರಿದೆ!
ತನ್ನ ತಂದೆಯೊಂದಿಗೆ ಪ್ರತಿನಿಧಿಯಾಗಿ ಐದು ತಿಂಗಳ ಮಗು ವಾಹನ ದಟ್ಟಣೆ ಕಡಿಮೆ ಮಾಡಲು ಮನವಿ ಸಲ್ಲಿಸಿದೆ. ಲಾಕ್ ಡೌನ್ ವೇಳೆ ಇಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದ್ದರಿಂದ ವಾಯು ಮಾಲಿನ್ಯ ಕಡಿಮೆಯಿತ್ತು. ಆದರೆ ಈಗ ವಾಹನ ದಟ್ಟಣೆ ಅತಿಯಾಗಿರುವುದರಿಂದ ಪಾರ್ಕ್ ಪ್ರದೇಶದಲ್ಲಿ ವಾಯು ಮಾಲಿನ್ಯ ಮಿತಿ ಮೀರಿದೆ. ಹೀಗಾಗಿ ಈ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧಿಸಲು ಆದೇಶ ಕೊಡಿ ಎಂದು ಹೈಕೋರ್ಟ್ ಗೆ ಮನವಿ ಮಾಡಲಾಗಿದೆ.