Select Your Language

Notifications

webdunia
webdunia
webdunia
webdunia

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯ ಮಾನಭಂಗ

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯ ಮಾನಭಂಗ
ಬೆಂಗಳೂರು , ಶನಿವಾರ, 26 ಡಿಸೆಂಬರ್ 2020 (10:32 IST)
ಬೆಂಗಳೂರು: ಪರಿಚಯದ ಯುವತಿಗೆ ಕೆಲಸದ ಆಮಿಷ ತೋರಿಸಿ ಯುವಕನೊಬ್ಬ ಮತ್ತು ಬರಿಸುವ ಕೇಕ್ ನೀಡಿ ಶೀಲಕೆಡಿಸಿದ ಘಟನೆ ನಗರದಲ್ಲಿ ನಡೆದಿದೆ.


ಈ ಸಂಬಂಧ ಮಂಡ್ಯ ಮೂಲದ ಡೆಲಿವರಿ ಬಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪಾರ್ಟಿಯೊಂದರಲ್ಲಿ ಯುವತಿಯ ಪರಿಚಯವಾಗಿತ್ತು. ಆಗ ಫೋನ್ ನಂಬರ್ ಪಡೆದುಕೊಂಡಿದ್ದ ಆರೋಪಿ ಬಳಿಕ ನಿತ್ಯವೂ ವ್ಯಾಟ್ಸಪ್ ಮೂಲಕ ಸಂಪರ್ಕದಲ್ಲಿದ್ದ. ಇದೀಗ ಕೆಲಸ ಕೊಡಿಸುವುದಾಗಿ ನಂಬಿಸಿ ನಾಯಂಡಹಳ್ಳಿಗೆ ಕರೆಸಿಕೊಂಡ ಆರೋಪಿ ಮತ್ತು ಬರಿಸುವ ಕೇಕ್ ತಿನಿಸಿ ಸಮೀಪದಲ್ಲಿರುವ ತನ್ನ ಅಕ್ಕನ ಮನೆಗೆ ಕರೆದೊಯ್ದು ಮಾನಭಂಗ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ವ್ಯಕ್ತಿಯ ಹತ್ಯೆ