Publish Date: Thu, 24 Mar 2022 (11:50 IST)
Updated Date: Thu, 24 Mar 2022 (09:01 IST)
ಕಾನ್ಪುರ: ಲವ್ವರ್ ಜೊತೆ ಸೇರಿಕೊಂಡು ಗಂಡನನ್ನು ಕೊಂದ ಮಹಿಳೆಯನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಗಂಡನನ್ನು ಮಹಿಳೆ ಮತ್ತು ಆಕೆಯ ಪ್ರಿಯಕರ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾಡಿನ ಪ್ರದೇಶದಲ್ಲಿ ಬಿಸಾಕಿದ್ದಾರೆ.
ಪೊಲೀಸರಿಗೆ ಪ್ರಾಣಿಗಳು ತಿಂದ ಅರ್ಧ ಮೃತದೇಹ ಸಿಕ್ಕಿದೆ. ಆದರೆ ಮೃತದೇಹದ ಪಾಕೆಟ್ ನಲ್ಲಿದ್ದ ಮೊಬೈಲ್ ಫೋನ್ ನಿಂದಾಗಿ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಪತ್ನಿಯನ್ನು ವಿಚಾರಿಸಿದಾಗ ಮೊದಲು ಆಕೆ ಗಂಡ ಕೆಲಸಕ್ಕೆಂದು ಹೋಗಿದ್ದಾನೆ. ರಾತ್ರಿಯಾದರೂ ಆತನ ಮೊಬೈಲ್ ಗೆ ಸಂಪರ್ಕ ಸಿಗಲಿಲ್ಲ. ಆತನಿಗೆ ಕುಡಿಯುವ ಚಟವಿತ್ತು ಎಂದೆಲ್ಲಾ ನಾಟಕವಾಡಿದ್ದಾಳೆ. ಆದರೆ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.