Publish Date: Wed, 23 Mar 2022 (09:00 IST)
Updated Date: Wed, 23 Mar 2022 (09:26 IST)
ಹೈದರಾಬಾದ್: ಲವ್ ಪ್ರಪೋಸಲ್ ತಿರಸ್ಕರಿಸಿದ್ದಕ್ಕೆ ಆಟೋ ಚಾಲಕನೊಬ್ಬ ಅಪ್ರಾಪ್ತೆಯ ಕೊಲೆಗೆ ಯತ್ನಿಸಿದ ಘಟನೆ ನೆಲ್ಲೋರ್ ನಲ್ಲಿ ನಡೆದಿದೆ.
29 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ತೀವ್ರ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಆಟೋ ಚಾಲಕನಾಗಿದ್ದ ಆರೋಪಿ ಪ್ರೀತಿಸುವಂತೆ ಬಾಲಕಿಯ ಹಿಂದೆ ಬಿದ್ದಿದ್ದ. ಆದರೆ ಆಕೆ ಕಿವಿಗೊಡದೇ ಇದ್ದಾಗ ಚಾಕುವಿನಿಂದ ಇರಿದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.