ತಿರುವನಂತಪುರಂ: ಮೊಮ್ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದ 64 ವರ್ಷದ ವೃದ್ಧನಿಗೆ ಕೇರಳದ ಫಾಸ್ಟ್ ಟ್ರ್ಯಾಕ್ ಕೋರ್ಟ್ 73 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಎಂಟು ವರ್ಷದ ಮೊಮ್ಮಗನ ಮೇಲೆ ತಾತ ಅಸಹಜ ಲೈಂಗಿಕ ಕ್ರಿಯೆ ನಡೆಸುವುದನ್ನು ಅಜ್ಜಿ ನೋಡಿದ್ದಳು. ಇದರ ವಿರುದ್ಧ ಆಕೆ ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ತಾತನಿಗೆ 73 ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಿಚಾರಣೆ ನಡುವೆ ತಂದೆಯನ್ನು ಕಾಪಾಡಲು ಸಂತ್ರಸ್ತ ಬಾಲಕನ ತಂದೆ ಹೇಳಿಕೆ ಬದಲಾಯಿಸಲು ಪ್ರಯತ್ನಿಸಿದ್ದರು. ಆದರೆ ಕೋರ್ಟ್ ಅದನ್ನು ಪರಿಗಣಿಸಲಿಲ್ಲ.