Select Your Language

Notifications

webdunia
webdunia
webdunia
webdunia

ಮಗಳನ್ನೇ ರೇಪ್ ಮಾಡಲು ಬಂದ ಮಲತಂದೆಯ ಮರ್ಮಾಂಗ ಕತ್ತರಿಸಿದ ತಾಯಿ

ಮಗಳನ್ನೇ ರೇಪ್ ಮಾಡಲು ಬಂದ ಮಲತಂದೆಯ ಮರ್ಮಾಂಗ ಕತ್ತರಿಸಿದ ತಾಯಿ
ಲಕ್ನೋ , ಶುಕ್ರವಾರ, 19 ಆಗಸ್ಟ್ 2022 (08:00 IST)
ಲಕ್ನೋ: ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಲು ಹೊರಟ ಮಲತಂದೆಯ ಮರ್ಮಾಂಗವನ್ನು ತಾಯಿ ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

36 ವರ್ಷದ ಮಹಿಳೆ ಎರಡು ವರ್ಷಗಳ ಹಿಂದೆ ಕುಡುಕ ಗಂಡನಿಂದ ಬೇರ್ಪಟ್ಟು ಆರೋಪಿಯೊಂದಿಗೆ ಸಹಜೀವನ ನಡೆಸುತ್ತಿದ್ದಳು. ಮಹಿಳೆಯ 14 ವರ್ಷದ ಪುತ್ರಿಯ ಮೇಲೆ ಮಲತಂದೆ ಕಣ್ಣು ಹಾಕಿದ್ದ.

ತಾಯಿ ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದಾಗ ಮಲತಂದೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಸರಿಯಾದ ಸಮಯಕ್ಕೆ ತಾಯಿ ಮನೆಗೆ ಬಂದಿದ್ದರಿಂದ ಮಗಳು ಬಚಾವ್ ಆಗಿದ್ದಳು. ಮಗಳನ್ನು ರಕ್ಷಿಸುವ ಸಲುವಾಗಿ ಆರೋಪಿ ಮೇಲೆ ಹಲ್ಲೆ ನಡೆಸಿದ್ದ ತಾಯಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಇದೀಗ ಮಹಿಳೆಯ ಮೇಲೆ ಪ್ರಕರಣ ದಾಖಲಾಗಿದ್ದು, ಮಲತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರಂಗ ಕೊರೆದು ಹೊರಬಂದ ಟಿಬಿಎಂ ಮಿಷನ್