Publish Date: Thu, 18 Aug 2022 (08:50 IST)
Updated Date: Thu, 18 Aug 2022 (09:27 IST)
ನವದೆಹಲಿ: ರೀಲ್ಸ್ ಮತ್ತು ಸೆಲ್ಫೀ ಹುಚ್ಚಿಗೆ ಬಿದ್ದಿದ್ದ ಅಪ್ರಾಪ್ತ ಬಾಲಕನೊಬ್ಬ ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ಫೋನ್ ಕಿತ್ತುಕೊಂಡಿದ್ದಾನೆ! ದೆಹಲಿಯಲ್ಲಿ ಇಂತಹದ್ದೊಂದು ಘಟನೆ ನಡೆದಿರುವು ತಡವಾಗಿ ಬೆಳಕಿಗೆ ಬಂದಿದೆ.
ಜೂನ್ ನಲ್ಲಿ ಘಟನೆ ನಡೆದಿತ್ತು. 15 ವರ್ಷದ ಬಾಲಕ ಮಹಿಳೆಯ ಕುತ್ತಿಗೆ ಸೀಳಿ ಕೊಲೆ ಮಾಡಿ ಫೋನ್ ಕಿತ್ತುಕೊಂಡು ಓಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಕೊನೆಗೂ ಈಗ ಆರೋಪಿಯನ್ನು ಸೆರೆಹಿಡಿದಿದ್ದಾರೆ. ವಿಚಾರಣೆ ವೇಳೆ ಆತ ರೀಲ್ಸ್ ಮಾಡಲು ಫೋನ್ ಬೇಕಿತ್ತು. ಹೀಗಾಗಿ ಕೊಲೆ ಮಾಡಿ ಫೋನ್ ಕದ್ದಿರುವುದಾಗಿ ಹೇಳಿಕೊಂಡಿದ್ದಾನೆ.