Select Your Language

Notifications

webdunia
webdunia
webdunia
webdunia

ತಂದೆಯ ಸ್ನೇಹಿತನಿಂದಲೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ

ತಂದೆಯ ಸ್ನೇಹಿತನಿಂದಲೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ
ತ್ರಿಶ್ಶೂರ್ , ಗುರುವಾರ, 18 ಆಗಸ್ಟ್ 2022 (08:40 IST)
ತ್ರಿಶ್ಶೂರ್: 12 ನೇ ತರಗತಿ ಓದುತ್ತಿದ್ದ ಹದಿಹರೆಯದ ಯುವತಿ ಮೇಲೆ ತಂದೆಯ ಸ್ನೇಹಿತನೇ ಅತ್ಯಾಚಾರವೆಸಗಿದ ಘಟನೆ ತ್ರಿಶ್ಶೂರ್ ನಲ್ಲಿ ನಡೆದಿದೆ.

ಆರೋಪಿ ಡ್ರಗ್ ವ್ಯಸನಿಯಾಗಿದ್ದು, ಯುವತಿ ತಂದೆಯ ಬಳಿ ಮಾದಕ ವಸ್ತು ಖರೀದಿಸಿ ತರಲು ಹೇಳಿದ್ದ. ಮನೆಯಲ್ಲಿ ಯುವತಿಯ ಹೊರತು ಯಾರೂ ಇಲ್ಲದ ವೇಳೆ ಬಂದಿದ್ದ ಆರೋಪಿ ಅತ್ಯಾಚಾರವೆಸಗಿದ್ದ.

ವಿಪರ್ಯಾಸವೆಂದರೆ ಈ ಬಗ್ಗೆ ಯುವತಿ ತಾಯಿಯ ಬಳಿ ಹೇಳಿದಾಗ ಆಕೆ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದಳು. ಬಳಿಕ ಯುವತಿ ತನ್ನ ಶಿಕ್ಷಕಿ ಬಳಿ ತನಗಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಬಗ್ಗೆ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಯುವತಿಯ ತಂದೆಯನ್ನು ಡ್ರಗ್ ಪೆಡ್ಲರ್ ಎಂಬ ಆರೋಪದ ಮೇಲೆ ಬಂಧಿಸಿದ್ದು, ಅತ್ಯಾಚಾರವೆಸಗಿದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಡಿ ವಿಚಾರಣೆ ಮುಂದೂಡಿಕೆ