Publish Date: Thu, 18 Aug 2022 (08:07 IST)
Updated Date: Thu, 18 Aug 2022 (09:13 IST)
ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದೆ.
ಪ್ರಕರಣ ಮೂವರು ಆರೋಪಿಗಳು ಜಾರ್ಜ್ಶೀಟ್ ಜೊತೆಗೆ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಒದಗಿಸುವಂತೆ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಲಾಯಿತು.
ಇಂದು ವಿಚಾರಣೆ ವೇಳೆ ಪ್ರಕರಣ ಇತರೆ ಆರೋಪಿಗಳಾದ ಸಚಿನ್ ನಾರಯಣ್, ಸುನೀಲ್ ಶರ್ಮಾ, ರಾಜೇಂದ್ರ. ಎನ್, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಒಪ್ಪಿದ ಇಡಿ ಪರ ವಕೀಲರು, ತರ್ಜುಮೆ ಮಾಡಿ ದಾಖಲೆಗಳನ್ನು ನೀಡಲು ನಾಲ್ಕೈದು ವಾರಗಳ ಸಮಯಬೇಕು ಎಂದು ಕೋರ್ಟ್ಗೆ ಹೇಳಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ಕೋರ್ಟ್ ವಿಚಾರಣೆ ಮುಂದೂಡಿತು.