Publish Date: Tue, 16 Aug 2022 (09:50 IST)
Updated Date: Tue, 16 Aug 2022 (09:59 IST)
ನೆಲಮಂಗಲ: ಮದುವೆಯಾಗಿ ಹೊಸ ಕನಸು ಹೊತ್ತು ಬಂದಿದ್ದ ಆ ಮಹಿಳೆಗೆ ಗಂಡನೆನಿಸಿಕೊಂಡವ ಕೈ ಕೊಟ್ಟಿದ್ದ. ಎರಡೇ ತಿಂಗಳಿಗೆ ಪತ್ನಿಗೆ ಕೈ ಕೊಟ್ಟು ಪ್ರೇಯಸಿ ಜೊತೆ ಎಸ್ಕೇಪ್ ಆಗಿದ್ದ.
ಪ್ರದೀಪ್ ಎಂಬ ಯುವಕ ಪ್ರೀತಿಸಿ ಯುವತಿಯ ಮನೆಯವರ ಒಪ್ಪಿಸಿ ಮದುವೆಯಾಗಿದ್ದ. ಅದರಂತೆ ಹೆಣ್ಣಿನ ಮನೆಯವರು ಚಿನ್ನಾಭರಣ ಹಾಕಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ಆದರೆ ಅದೇನಾಯ್ತೋ ಗೊತ್ತಿಲ್ಲ, ಮದುವೆಯಾದ ಎರಡೇ ತಿಂಗಳಿಗೆ ಯುವತಿಗೆ ಕೈ ಕೊಟ್ಟು ಮತ್ತೊಬ್ಬಾಕೆಯ ಜೊತೆ ಗುಟ್ಟಾಗಿ ಮದುವೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.