Publish Date: Tue, 16 Aug 2022 (08:50 IST)
Updated Date: Tue, 16 Aug 2022 (09:18 IST)
ನವದೆಹಲಿ: ಮನೆಯಲ್ಲಿ ಕಳ್ಳತನವಾಗಿದೆಯೆಂದು ಮನೆ ಮಾಲಿಕರು ಮಾಂತ್ರಿಕನನ್ನು ಕರೆಸಿ ಮನೆಗೆಲಸದ ಮಹಿಳೆಗೆ ಚಿತ್ರಹಿಂಸೆ ನೀಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಮನೆ ಮಾಲಿಕರ ಚಿನ್ನಾಭರಣ ಕಳ್ಳತನವಾಗಿತ್ತು. ಮಾಲಿಕರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ನೌಕರರ ಮೇಲೆ ಅನುಮಾನ. ಈ ಸಂಬಂಧ ಮಾಲಿಕರು ಮನೆಗೆ ಮಾಂತ್ರಿಕನನ್ನು ಕರೆಸಿದ್ದರು.
ಮಾಂತ್ರಿಕ ಮೂವರು ಮನೆಗೆಲಸದವರಿಗೆ ಬಾಯಿಗೆ ಅಕ್ಕಿ, ಕಲ್ಲು ತುರುಕಿ ಈಗ ಬಾಯಿ ಕೆಂಪಗಾದರೆ ಆಕೆಯೇ ಕಳ್ಳಿ ಎಂದಿದ್ದ. ಅದರಂತೆ ಸಂತ್ರಸ್ತ ಮಹಿಳೆಯ ಬಾಯಿ ಕೆಂಪಾಗಿತ್ತು. ಹೀಗಾಗಿ ಮಹಿಳೆಯ ಕೈಕಾಲು ಕಟ್ಟಿ ಹಾಕಿ ಥಳಿಸಿ ಚಿತ್ರಹಿಂಸೆ ನೀಡಲಾಗಿದೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.