Select Your Language

Notifications

webdunia
webdunia
webdunia
webdunia

ಹೊಟ್ಟೆಯಲ್ಲಿರೋದು ನಿನ್ನದೇ ಮಗು ಎಂದಿದ್ದಕ್ಕೆ ಸಿಟ್ಟು! ಗರ್ಭಿಣಿಗೆ ಇರಿದ ಪ್ರಿಯಕರ

ಹೊಟ್ಟೆಯಲ್ಲಿರೋದು ನಿನ್ನದೇ ಮಗು ಎಂದಿದ್ದಕ್ಕೆ ಸಿಟ್ಟು! ಗರ್ಭಿಣಿಗೆ ಇರಿದ ಪ್ರಿಯಕರ
ಥಾಣೆ , ಮಂಗಳವಾರ, 16 ಆಗಸ್ಟ್ 2022 (08:30 IST)
ಥಾಣೆ: ನಿನ್ನದೇ ಮಗು ನನ್ನ ಹೊಟ್ಟೆಯಲ್ಲಿದೆ, ಇದರ ಪೋಷಣೆಗೆ ಹಣ ಕೊಡು ಎಂದು ಕೇಳಿದ್ದಕ್ಕೆ ಮಹಿಳೆಯನ್ನು ಪ್ರಿಯಕರ ಚಾಕು ಇರಿದು ಕೊಲೆ ಮಾಡಿದ್ದಾನೆ.

ಕೆಲವು ತಿಂಗಳುಗಳ ಮೊದಲು ಯುವತಿಗೆ ಅಬಾರ್ಷನ್ ಆಗಿತ್ತು. ಇದಾದ ಬಳಿಕ ಇಬ್ಬರ ನಡುವೆ ಸಂಬಂಧ ಹಳಸಿತ್ತು. ಈಗಾಗಲೇ ಪ್ರಿಯಕರ 1.5 ಲಕ್ಷ ರೂ.ಗಳನ್ನು ಯುವತಿಗೆ ನೀಡಿದ್ದ. ಇದೀಗ ಮತ್ತೆ ಆಕೆ ಗರ್ಭಿಣಿಯಾಗಿದ್ದಳು.

ಈ ನಡುವೆ ಆರೋಪಿ ಯುವಕನಿಗೆ ಮನೆಯಲ್ಲಿ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಲು ತಯಾರಿ ನಡೆದಿತ್ತು. ಇದನ್ನು ತಿಳಿದ ಪ್ರೇಯಸಿ ಮನೆಗೆ ಬಂದು ಗಲಾಟೆ ಮಾಡಿದ್ದಳು. ತನ್ನ ಹೊಟ್ಟೆಯಲ್ಲಿರುವುದು ನಿನ್ನದೇ ಮಗು ಎಂದು ಯುವತಿ ಆರೋಪಿಸಿದ್ದಳು. ಆದರೆ ಇದನ್ನು ನಿರಾಕರಿಸಿದ ಪ್ರಿಯಕರ ಸಿಟ್ಟಿನಿಂದ ಆಕೆಯ ಕುತ್ತಿಗೆ ಸೀಳಿದ್ದಾನೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ ಪ್ರಮಾಣ ಏರಿಕೆ!