Select Your Language

Notifications

webdunia
webdunia
webdunia
webdunia

ಮಾಂಸಾಹಾರ ಪಿಜ್ಜಾ ನೀಡಿದ್ದಕ್ಕೆ 1 ಕೋಟಿ ರೂ. ಪರಿಹಾರ ಕೇಳಿದ ಮಹಿಳೆ

ಮಾಂಸಾಹಾರ ಪಿಜ್ಜಾ ನೀಡಿದ್ದಕ್ಕೆ 1 ಕೋಟಿ ರೂ. ಪರಿಹಾರ ಕೇಳಿದ ಮಹಿಳೆ
ಲಕ್ನೋ , ಭಾನುವಾರ, 14 ಮಾರ್ಚ್ 2021 (10:28 IST)
ಲಕ್ನೋ: ಪಕ್ಕಾ ಸಸ್ಯಾಹಾರಿಯಾಗಿರುವ ತನಗೆ ಮಾಂಸಾಹಾರಿ ಪಿಜ್ಜಾ ನೀಡಿದ್ದಕ್ಕೆ ಮಹಿಳೆಯೊಬ್ಬರು ಅಮೆರಿಕಾ ಮೂಲದ ಪಿಜ್ಜಾ ತಯಾರಕರ ವಿರುದ್ಧ 1 ಕೋಟಿ ರೂ. ಪರಿಹಾರದ ದಾವೆ ಹೂಡಿರುವ ಪ್ರಕರಣ ಗಾಝಿಯಾಬಾದ್ ನಲ್ಲಿ ನಡೆದಿದೆ.


ಮಹಿಳೆ ಸಂಪ್ರದಾಯಸ್ಥ ಸಸ್ಯಾಹಾರಿಯಾಗಿದ್ದರು. ಹೋಳಿ ಹಬ್ಬದ ದಿನ ಗಾಝಿಯಾಬಾದ್ ನ ಮಳಿಗೆಯೊಂದರಿಂದ ಸಸ್ಯಾಹಾರಿ ಪಿಜ್ಜಾ ತರಿಸಿಕೊಂಡಿದ್ದರು. ಆದರೆ ಅರ್ಧ ತಿಂದಾದ ಮೇಲೆ ಮಶ್ರೂಮ್ ಬದಲು ಪಿಜ್ಜಾದಲ್ಲಿ ಮಾಂಸವಿರುವುದು ಆಕೆಗೆ ತಿಳಿದುಬಂತು.

ತಕ್ಷಣವೇ ಆಕೆ ತನ್ನ ಲಾಯರ್ ಮೂಲಕ ಗ್ರಾಹಕ ಹಿತರಕ್ಷಣಾ ಖಾಯಿದೆಯಡಿ ಕಂಪನಿ ವಿರುದ್ಧ 1 ಕೋಟಿ ರೂ. ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದಾಳೆ. ಸಂಪ್ರದಾಯಸ್ಥ ಸಸ್ಯಾಹಾರಿಯಾಗಿರುವ ತನಗೆ ಮಾಂಸಾಹಾರ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಡೆಯಲು ಕೆಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಬೇಕಿದೆ. ಇದಕ್ಕೆ ಲಕ್ಷಾಂತರ ರೂ. ಖರ್ಚಾಗಲಿದೆ. ಹೀಗಾಗಿ 1 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಆಕೆ ಗ್ರಾಹಕ ಕೋರ್ಟ್ ಮೊರೆ ಹೋಗಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖೇಶ್ ಅಂಬಾನಿ ಮನೆಯಲ್ಲಿ ಸ್ಪೋಟಕ ಪ್ರಕರಣ: ಸಚಿನ್ ಬಂಧಿಸಿದ ಎನ್ ಐಎ