Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಮಹಿಳೆ

ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಮಹಿಳೆ
ಅರುಣಾಚಲ ಪ್ರದೇಶ , ಬುಧವಾರ, 16 ಅಕ್ಟೋಬರ್ 2019 (08:20 IST)
ಅರುಣಾಚಲ ಪ್ರದೇಶ : ಬಾಮೆಂಗ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗುರುಕ್ ಪೋರ್ದುಂಗ್ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದಾಳೆ.



ಮುಖ್ಯಮಂತ್ರಿ ಪೆಮಾ ಖಂಡು  ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಆಪ್ತನಾಗಿರುವ ಶಾಸಕ ಗುರುಕ್ ಪೋರ್ದುಂಗ್ ಬಾಮೆಂಗ್ ನಲ್ಲಿರುವ ಆರೋಗ್ಯ ಕೇಂದ್ರಗಳ ಕೆಲಸದ ಬಗ್ಗೆ ಚರ್ಚಿಸಲೆಂದು ತನ್ನನ್ನು ಇಟಾನಗರದ ಹೋಟೆಲ್ ರೂಂಗೆ ಕರೆಸಿ ಅಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕರ ವಿರುದ್ಧ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಶಾಸಕನ ವಿರುದ್ಧ ದೂರು ದಾಖಲಿಸಿದ್ದಾರೆ.

 

ಆದರೆ ಇದನ್ನು ಅಲ್ಲಗೆಳೆದ ಶಾಸಕ ಗುರುಕ್ ಪೋರ್ದುಂಗ್ ಮಹಿಳೆ ತಾನಾಗಿಯೇ ಹೊಟೇಲ್ ಗೆ ಬಂದು ನನ್ನ ಜೊತೆ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದು ಪ್ರತಿದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ ಕನ್ನಯ್ಯ