Publish Date: Mon, 14 Oct 2019 (13:16 IST)
Updated Date: Mon, 14 Oct 2019 (13:21 IST)
ಯುವತಿಯರು, ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡಿರೋ ವಿಷಯಕ್ಕೆ ತಮ್ಮ ಬ್ರಾಗಳನ್ನೇ ಧರಿಸಿರಲಿಲ್ಲ.
ಅರೇ, ಇದೇನಪ್ಪ ಮಹಿಳೆಯರು ಯಾಕೆ ಬ್ರಾ ಹಾಕಿಕೊಳ್ಳಲಿಲ್ಲ ಅಂತ ಕೇಳಿದ್ರಾ? ನೋ ಬ್ರಾ ಡೇ ಟ್ರೆಂಡಿಂಗ್ ನಲ್ಲಿ ಪಾಲ್ಗೊಂಡ ಸ್ತ್ರೀಯರು ಬ್ರಾ ಧರಿಸದೇ ದಿನಾಚರಣೆ ಮಾಡಿದ್ರು.
ಇಷ್ಟು ವರ್ಷ ತೆರೆಮರೆಯಲ್ಲಿದ್ದ ನೋ ಬ್ರಾ ಡೇ, ಇದೀಗ ಸಖತ್ ಟ್ರೆಂಡ್ ಆಗಿದೆ. ಸ್ತನ ಕ್ಯಾನ್ಸರ್ ಹಾಗೂ ಸ್ತನಗಳನ್ನು ಸೆಲ್ಫ್ ಎಕ್ಸಾಮಿನೇಷನ್ ಮಾಡಿಕೊಳ್ಳೋಕೆ ಅಂತ ನೋ ಬ್ರಾ ಡೇ ಆಚರಣೆ ಮಾಡಲಾಗ್ತಿದೆ.
2011 ರಲ್ಲಿ ಕೆನಡಾದಲ್ಲಿ ಶುರುವಾದ ಟ್ರೆಂಡ್ ಇದೀಗ ಭಾರತದಲ್ಲೂ ತನ್ನ ಛಾಪು ಮೂಡಿಸಿದೆ. ನೋ ಬ್ರಾ ಡೇ ಯನ್ನ ಅಕ್ಟೋಬರ್ 13 ರಂದು ಬಹುತೇಕ ದೇಶಗಳಲ್ಲಿ ಆಚರಣೆ ಮಾಡಲಾಯಿತು.
ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಬ್ರಾ ಧರಿಸದೇ ಕಚೇರಿ, ಕಾಲೇಜು, ನಿತ್ಯದ ಕೆಲಸಗಳಿಗೆ ತೆರಳಿ ದಿನಾಚರಣೆ ಮಾಡಿದ್ರು.