Publish Date: Thu, 08 Aug 2019 (12:15 IST)
Updated Date: Thu, 08 Aug 2019 (12:17 IST)
ಚಂಡೀಗಢ : ಪ್ರಿಯಕರನ ಜೊತೆ ಪತ್ನಿ ನಾಪತ್ತೆಯಾದ ಹಿನ್ನಲೆಯಲ್ಲಿ ಪತಿ ಆರು ವರ್ಷದ ಮಗನಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಪಂಚಾಬ್ ರಾಜ್ಯದ ನೂರಪುರಬೇದಿಯಲ್ಲಿ ನಡೆದಿದೆ.
ಹರಿಜಿಂದರ್ ಸಿಂಗ್ (32) ಆತ್ಮಹತ್ಯೆಗೆ ಶರಣಾದ ಪತಿ, ಜಸ್ವೀರ್ ಕೌರ್ ಓಡಿ ಹೋದ ಪತ್ನಿ, ಹರಕೀರತ್(6) ತಾಯಿಯ ಕೃತ್ಯಕ್ಕೆ ಬಲಿಯಾದ ಮಗು. ಪತ್ನಿ ಜಸ್ವೀರ್ ಕೌರ್ ಅದೇ ಗ್ರಾಮದ ಸುಖ್ವೀರ್ ಸಿಂಗ್ ಜೊತೆ ಈ ಹಿಂದೆ ಕೂಡ ನಾಪತ್ತೆಯಾಗಿದ್ದು ನಂತರ ಮತ್ತೆ ಮರಳಿ ಬಂದು ಕ್ಷಮೆ ಕೇಳಿ ತನ್ನ ಪತಿ ಹಾಗೂ ಮಗುವಿನ ಜೊತೆ ವಾಸವಾಗಿದ್ದಳು.
ಆದರೆ ಇದೀಗ ತನ್ನ ಚಾಳಿ ಮುಂದುವರಿಸಿದ ಆಕೆ ಮತ್ತೆ ಅದೇ ಪ್ರಿಯಕರನ ಜೊತೆ ಓಡಿ ಹೋಗಿದ್ದರಿಂದ ಅವಮಾನ ತಾಳಲಾರದೆ ಪತಿ ತನ್ನೊಂದಿಗಿದ್ದ 6 ವರ್ಷದ ಹರಕೀರತ್ ನಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.