ಅದನ್ನ ಲವರ್ ಗೆ ಕೊಟ್ಟಿರುವೆ ; ಗಂಡನ ಜೊತೆ ಹ್ಯಾಂಗ ಇರಲಿ?

ಬುಧವಾರ, 7 ಆಗಸ್ಟ್ 2019 (14:18 IST)
ಪ್ರಶ್ನೆ: ನನ್ ಹೆಸರು ಐಶ್ವರ್ಯಾ ಅಂತ. ಊರು ಯಾವುದು ಅಂತ ಕೇಳಬೇಡಿ. ನಾನು ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಶಿಕ್ಷಕನಾಗಿರೋ ನನ್ನ ಮಾವನೊಂದಿಗೆ ಮದುವೆಯಾಗಿದ್ದೇನೆ. ಮದುವೆಯಾಗಿ ಒಂದು ವರ್ಷ ಆಗಿದೆ.

ಆದರೆ ಗಂಡನೊಂದಿಗೆ ಈಗಲೂ ಸೇರಿಲ್ಲ. ಹೀಗಾಗಿ ಗಂಡ, ಹೊಡೆಯುವುದು, ಬಡಿಯುವುದು ಮಾಡುತ್ತಿದ್ದಾನೆ. ಆದರೆ ನನ್ನ ಪ್ರಿಯಕರಿಗೆ ಮನಸು, ಮೈ ಕೊಟ್ಟಿರುವ ನಾನು ಅದನ್ನು ನನ್ನ ಗಂಡನೊಂದಿಗೆ ಹಂಚಿಕೊಳ್ಳಲು ಇಷ್ಟವಾಗುತ್ತಿಲ್ಲ. ಪರಿಹಾರ ಇದ್ದಲ್ಲಿ ತಿಳಿಸಿ.

ಉತ್ತರ: ನಿಮ್ಮ ಪ್ರೀತಿ ನಿಜವೇ ಆಗಿದ್ದಲ್ಲಿ ನೀವು ಧೈರ್ಯ ತೋರಿ ಪ್ರೀತಿಸಿದವನನ್ನೇ ಮದುವೆ ಆಗಬಹುದಿತ್ತು. ಪ್ರೀತಿಸಿದವನಿಗೆ ಮನಸ್ಸು ಕೊಟ್ಟರೂ ಪರವಾಗಿಲ್ಲ ಮದುವೆಗಿಂತ ಮೊದಲೇ ಮೈ ಕೊಡಬಾರದಿತ್ತು.

ಅದಿರಲಿ, ನಿಮ್ಮ ಗಂಡನಿಗೆ ನಿಮ್ಮ ಪ್ರಿಯಕರ ವಿಷಯ ತಿಳಿದಿದೆಯಾ ಇಲ್ಲವಾ ಎನ್ನುವುದು ಗೊತ್ತಿಲ್ಲ.

ಒಂದು ವೇಳೆ ಗೊತ್ತೇ ಆಗಿದ್ದಲ್ಲಿ ತಿಳಿಸಿ ಹೇಳಿ ನಿಮ್ಮ ಪ್ರಿಯಕರನ ಜತೆ ಮದುವೆಯಾಗಿ. ಇಲ್ಲವಾದರೆ ಪ್ರಿಯಕರನನ್ನು ಮರೆತು ಗಂಡನೊಂದಿಗೆ ಹೊಂದಿಕೊಂಡು ಬಾಳ್ವೆ ಮಾಡಿ. ನಿರ್ಧಾರ ನಿಮ್ಮ ಕೈಯಲ್ಲಿದೆ.
ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೋಮ್ಯಾನ್ಸ್ ಮಾಡಿದೋಳು ದೂರ ಆದಳಾ?