Publish Date: Sat, 03 Aug 2019 (15:16 IST)
Updated Date: Sat, 03 Aug 2019 (15:18 IST)
ಪ್ರಶ್ನೆ: ನನ್ನ ವಯಸ್ಸು 25 ಮತ್ತು ಅವಳ ವಯಸ್ಸು 34. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ. ಕಳೆದ ವರ್ಷ ಆಕೆಯ ಗಂಡ ತೀರಿಕೊಂಡಿದ್ದಾನೆ. ಗಂಡ ಸತ್ತು ಏಳೆಂಟು ತಿಂಗಳು ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು. ಆದರೆ ಅವಳ ಕಚೇರಿ ಕೆಲಸ, ಬ್ಯಾಂಕ್, ಮಾರ್ಕೆಟ್ ಹೀಗೆ ಮೊದಲಾದ ಕೆಲಸಗಳಿಗೆ ನನ್ನನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಿದ್ದಾಳೆ. ಹೊರಗಡೆ ಹೋಗುವಾಗ ಕೈಗೆ ಕೈ ತಗಲುವುದು, ಮೈಗೆ ಮೈಗೆ ತಗಲುವುದು ನಡೆಯಿತು.
ಅದಾದ ಬಳಿಕ ನಾನು ನನಗೆ ಅರಿವಿಲ್ಲದಂತೆ ಆಕೆಯ ಕಡೆಗೆ ಆಕರ್ಷಿತನಾದೆ. ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ಬರಸೆಳೆದು ತಬ್ಬಿಕೊಂಡೆ. ಬಿಟ್ಟುಬಿಡದಂತೆ ಮುದ್ದಾಡಿದೆ. ಮೊದಲಿಗೆ ಕೊಸರಿದಳಾದರೂ ಆ ಬಳಿಕ ಆಕೆಯೂ ಸಹಕರಿಸಿದಳು. ಗಂಡ ತೀರಿ ಹೋದರೂ ಅವಳು ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಮುಂದೇನು ಮಾಡಲಿ?
ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡ ತೀರಿದ ಬಳಿಕ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಮದುವೆಯಾಗುವ ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.
ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ನಿಮ್ಮ ಮನೆಯವರಿಗೆ ಒಪ್ಪಿಸಿ ಆಕೆಯನ್ನೇ ಮದುವೆಯಾಗಿ ಸುಂದರವಾಗಿ ಜೀವಿಸಿ. ನಿಮ್ಮ ಅಕ್ಕ, ತಂಗಿಯ ಬಾಳು ಇದೇ ರೀತಿ ಆಗಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ವಿಚಾರ ಮಾಡಿ. ಆ ಹೆಣ್ಣಿಗೆ ಬೆಲೆ ಕೊಡಿ, ಬಾಳು ಕೊಡಿ.