Publish Date: Fri, 02 Aug 2019 (09:39 IST)
Updated Date: Fri, 02 Aug 2019 (11:48 IST)
ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ಕೆಲಸದ ನಿಮಿತ್ತ ನಾನು ನನ್ನ ಹೆಂಡತಿಯಿಂದ ದೂರವಿರುವ ಕಾರಣ ನೆರೆಹೊರೆಯ 45 ವರ್ಷದ ಅವಿವಾಹಿತೆಯೊಂದಿಗೆ ಕಾಂಡೋಮ್ ಇಲ್ಲದೇ ಲೈಂಗಿಕ ಸಂಬಂಧ ಬೆಳೆಸಿದ್ದೇನೆ. ಈಗ ನಾನು ಮತ್ತೆ ನನ್ನ ಹೆಂಡತಿಯೊಂದಿಗೆ ಸಂಭೋಗ ನಡೆಸಿದರೆ ಆಕೆಗೆ ಸೋಂಕು ತಗಲುತ್ತದೆಯೇ? ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ?
ಉತ್ತರ: ನಿಮ್ಮ ಹೆಂಡತಿಯನ್ನು ಅಷ್ಟೊಂದು ಪ್ರೀತಿಸುವವರು ಬೇರೆ ಮಹಿಳೆಯ ಸಂಬಂಧ ಬೆಳೆಸಿದ್ದು ತಪ್ಪು. ಇದರಿಂದ ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಕಾಂಡೋಮ್ ಬಳಸದೆ ದೈಹಿಕ ಸಂಬಂಧ ಬೆಳೆಸಿದ್ದು ನಿಮಗೆ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದ ನೀವು ರೋಗಶಾಸ್ತ್ರಜ್ಞರನ್ನು ಭೇಟಿ ಮಾಡಿ ನಿಮಗೆ ಸೋಂಕು ತಗಲಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಳ್ಳಿ. ನಂತರ ನಿಮ್ಮ ಹೆಂಡತಿಯ ಜೊತೆ ಸಂಬಂಧ ಬೆಳೆಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.