Select Your Language

Notifications

webdunia
webdunia
webdunia
webdunia

ನಿಧನರಾದ ಸುಷ್ಮಾ ಸ್ವರಾಜ್ ಗೆ ಅವಮಾನ ಮಾಡಿದ ಪಾಕ್ ನಟಿ ವೀಣಾ ಮಲ್ಲಿಕ್

ನಿಧನರಾದ ಸುಷ್ಮಾ ಸ್ವರಾಜ್ ಗೆ ಅವಮಾನ ಮಾಡಿದ ಪಾಕ್ ನಟಿ ವೀಣಾ ಮಲ್ಲಿಕ್
ನವದೆಹಲಿ , ಗುರುವಾರ, 8 ಆಗಸ್ಟ್ 2019 (12:12 IST)
ನವದೆಹಲಿ : ತಮ್ಮ ಜೀವಿತಾವಧಿಯಲ್ಲಿ ದೇಶದ ಜನರಿಗಾಗಿ ಸೇವೆ ಸಲ್ಲಿಸಿ ನಿಧನರಾದ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಪಾಕಿಸ್ತಾನದ ನಟಿಯೊಬ್ಬಳು ಅವಮಾನ ಮಾಡಿದ್ದಾಳೆ.




ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಸುಷ್ಮಾ ಸ್ವರಾಜ್ ನಿಧನರಾದ ದಿನದಂದು ನಟಿ ವೀಣಾ ಮಲ್ಲಿಕ್ ಟ್ವಿಟ್ಟರಿನಲ್ಲಿ RIH ಎಂದು ಟ್ವೀಟ್ ಮಾಡಿದ್ದಾರೆ. RIH ಎಂದರೆ ರೆಸ್ಟ್ ಇನ್ ಹೆಲ್ (ನಿಮಗೆ ನರಕ ಸಿಗಲಿ) ಎಂದರ್ಥ. ವೀಣಾ ಅವರು ತಮ್ಮ ಟ್ವೀಟ್‍ ನಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ.


ಆದರೆ ಸುಷ್ಮಾ ಸ್ವರಾಜ್ ಅವರ ನಿಧನದ ಸಂದರ್ಭದಲ್ಲಿ ಈ ರೀತಿ ಟ್ವೀಟ್ ಮಾಡಿರುವುದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ನೀನು ಅಸಹ್ಯಕರ ಅಲೋಚನೆ ದ್ವೇಷ ತುಂಬಿದ ವ್ಯಕ್ತಿ. ನಿಧನ ಹೊಂದಿದ್ದ ಮಹಿಳೆಯನ್ನು ಸಹ ನೀನು ಬಿಡುವುದಿಲ್ಲ. ನಿನಗೆ ನಾಚಿಕೆಯಾಗಬೇಕು. ನೀನು ಈಗಾಗಲೇ ನರಕದಲ್ಲಿ ಅಂದರೆ ಪಾಕಿಸ್ತಾನದಲ್ಲಿ ಇದ್ದೀಯಾ. ನೀನು ಮುಂದೆ ಖಂಡಿತವಾಗಿಯೂ ನರಕಕ್ಕೆ ಹೋಗುತ್ತೀಯಾ ಎಂದು ತಿರುಗೇಟು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಗುವನ್ನೇ ಕೊಲೆ ಮಾಡಿದ ಪಾಪಿ ತಾಯಿ