Publish Date: Wed, 07 Aug 2019 (11:34 IST)
Updated Date: Wed, 07 Aug 2019 (11:37 IST)
ಬೆಂಗಳೂರು : ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ನಿಧನರಾದ ಹಿನ್ನಲೆಯಲ್ಲಿ ಬಿಜೆಪಿ ಸೇರಿದಂತೆ ಹಲವು ರಾಜಕೀಯ ನಾಯಕರು ದುಃಖದಲ್ಲಿ ಮುಳುಗಿರುವಾಗ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ವೊಂದನ್ನು ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸುಷ್ಮಾ ಸ್ವರಾಜ್ ನಿಧನರಾದ ಕೆಲವು ಹೊತ್ತಿನ ನಂತರ ಸುಮಲತಾ ಅಂಬರೀಶ್ ಅವರು ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸುವ ಬದಲು ಬಿಜೆಪಿ ಜೊತೆಗಿನ ಡಿನ್ನರ್ ಮೀಟಿಂಗ್ ಮಾಡಿರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಇದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ಭಾರತದ ಜನತೆಗಾಗಿ ಮಹತ್ತರವಾದ ಸೇವೆ ಸಲ್ಲಿಸಿದ ಸುಷ್ಮಾ ಸ್ವರಾಜ್ ರಂತಹ ದಿಗ್ಗಜೆಯನ್ನು ಕಳೆದುಕೊಂಡಿದ್ದೇವೆ. ಈ ಸಮಯದಲ್ಲಿ ಈ ತರಹದ ಟ್ವೀಟ್ ಮಾಡುವುದು ಸರಿಯಲ್ಲ. ಬಿಜೆಪಿಯವರ ಭಾವನೆಗೆ ಧಕ್ಕೆ ತರಬೇಡಿ ಎಂದು ಕಿಡಿಕಾರಿದ್ದಾರೆ.