Publish Date: Wed, 16 Dec 2020 (07:22 IST)
Updated Date: Wed, 16 Dec 2020 (07:25 IST)
ಉತ್ತರ ಪ್ರದೇಶ : 55 ವರ್ಷದ ವ್ಯಕ್ತಿಯೊಬ್ಬ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನ ಪತ್ನಿ ಹಾಗೂ ಹಿರಿಯ ಸೊಸೆ ಸೇರಿ ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಗೆ ನಾಲ್ವರು ಗಂಡುಮಕ್ಕಳಿದ್ದು ಅದರಲ್ಲಿ ಇಬ್ಬರಿಗೆ ವಿವಾಹವಾಗಿದೆ. ವ್ಯಕ್ತಿ ಕಿರಿಯ ಮಗನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಪತ್ನಿ ಮತ್ತು ಹಿರಿಯ ಸೊಸೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಅವರ ನಡುವೆ ವಾಗ್ವಾದ ನಡೆದು ವ್ಯಕ್ತಿ ಇವರಿಬ್ಬರ ಮೇಲೆ ಹಲ್ಲೆ ಮಾಡಿದ ಕಾರಣ ಇಬ್ಬರು ಸೇರಿ ವ್ಯಕ್ತಿಯ ಗಂಟಲು ಸೀಳಿ ಕೊಲೆ ಮಾಡಿದ್ದಾರೆ.
ಈ ಬಗ್ಗೆ ಕಿರಿಯ ಸೊಸೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ಮಹಿಳೆಯರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.