Select Your Language

Notifications

webdunia
webdunia
webdunia
webdunia

ಜಗಳಮಾಡಿದ್ದಕ್ಕೆ ಪತ್ನಿಗೆ ಇಂತಹ ಗತಿ ತಂದ ಕುಡುಕ ಪತಿ

ಜಗಳಮಾಡಿದ್ದಕ್ಕೆ  ಪತ್ನಿಗೆ ಇಂತಹ ಗತಿ ತಂದ ಕುಡುಕ ಪತಿ
ತ್ರಿಪುರ , ಬುಧವಾರ, 16 ಡಿಸೆಂಬರ್ 2020 (07:17 IST)
ತ್ರಿಪುರ : ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ 30 ವರ್ಷದ  ಪತ್ನಿಯ ತಲೆ ಕಡಿದು ಕೊಂದ ಘಟನೆ ತ್ರಿಪುರ ಉತ್ತರ ಸೋನೈಚೆರಿಯಲ್ಲಿರುವ  ಬೆಲೋನಿಯಾ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಕಿಲ್ಲಮುರಾ ಗ್ರಾಮದಲ್ಲಿ ನಡೆದಿದೆ.

ಖಿನ್ನತೆಗೆ ಒಳಗಾಗಿದ್ದ ಆರೋಪಿ ಕುಡಿತದ ದಾಸನಾಗಿದ್ದ. ಈ ಬಗ್ಗೆ ದಂಪತಿಗಳ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿ  ಅಲ್ಲಿದ್ದ ಕತ್ತಿಯಿಂದ ಪತ್ನಿಯ ತಲೆ ಕಡಿದು ಹಾಕಿದ್ದಾನೆ.

ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ  ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕಕ್ಕೆ ಜೆಡಿಎಸ್ ವಿರೋಧ