Publish Date: Tue, 15 Dec 2020 (09:58 IST)
Updated Date: Tue, 15 Dec 2020 (09:59 IST)
ಪಾಟ್ನಾ: ಮದ್ಯ ವ್ಯಸನಿಯಾಗಿದ್ದ ಪತಿ ಮಹಾಶಯನೊಬ್ಬ ಸ್ನೇಹಿತರೊಂದಿಗೆ ಜೂಜಾಟವಾಡುವಾಗ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಘಟನೆ ಬಿಹಾರದಲ್ಲಿ ನಡೆದಿದೆ.
36 ವರ್ಷದ ವ್ಯಕ್ತಿ ಈ ರೀತಿ ಪತ್ನಿಯನ್ನು ಸೋತು ಸ್ನೇಹಿತರಿಗೆ ಬಿಟ್ಟುಕೊಟ್ಟಿದ್ದು, ಅವರು ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಘಟನೆ ನಡೆದಿದೆ. ಪತ್ನಿ ಸ್ನೇಹಿತರ ಜತೆ ಹೋಗಲು ಒಪ್ಪದೇ ಇದ್ದಾಗ ಪತಿ ಮಹಾಶಯನೇ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಹೇಗೋ ಪತಿಯ ಮನೆಯಿಂದ ತಪ್ಪಿಸಿಕೊಂಡ ಮಹಿಳೆ ತವರು ಮನೆ ಸೇರಿಕೊಂಡಿದ್ದು, ಬಳಿಕ ಸಾಮಾಜಿಕ ಕಾರ್ಯಕರ್ತರಿಗೆ ದೂರು ನೀಡಿದ್ದಾಳೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಪತಿಯನ್ನು ಬಂಧಿಸಿದ್ದಾರೆ.