Publish Date: Mon, 14 Dec 2020 (09:06 IST)
Updated Date: Mon, 14 Dec 2020 (09:07 IST)
ಮುಂಬೈ: ವ್ಯಾಟ್ಸಪ್ ವಿಡಿಯೋ ಕರೆ ಮಾಡಿ ಆತ್ಮರತಿ ಮಾಡಿ ವ್ಯಕ್ತಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮುಂಬೈನಲ್ಲಿ ನಟಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.
ಬ್ರಿಟನ್ ಕೋಡ್ ಸಂಖ್ಯೆಯಿಂದ ಕರೆ ಬರುತ್ತಿತ್ತು. ಈತನ ಪರಿಚಯವೂ ತನಗಿಲ್ಲ. ಆದರೆ ವಿಡಿಯೋ ಕರೆ ಮಾಡುತ್ತಿದ್ದಲ್ಲದೆ, ಅಶ್ಲೀಲವಾಗಿ ನಡೆದುಕೊಂಡು ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಈಗ ದೂರವಾನಿ ಕರೆಯನ್ನು ಟ್ರೇಸ್ ಮಾಡಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.