Publish Date: Mon, 14 Dec 2020 (10:31 IST)
Updated Date: Mon, 14 Dec 2020 (10:33 IST)
ಸೂರತ್ : ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಅವಳ ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ತನ್ನ ಕೃತ್ಯದಿಂದ ಬಚಾವ್ ಆಗಲು ಅಹಮದಾಬಾದ್ ಗೆ ಕಾಲ್ನಡಿಗೆಯಲ್ಲಿ ಸಾಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಕೆಲವು ವರ್ಷಗಳಿಂದ ತರಕಾರಿ ಮತ್ತು ಹಣ್ಣಿನ ಬಂಡಿಯ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ, ಏಜೆಂಟರ್ ಗೆ 3 ಲಕ್ಷ ಹಣ ನೀಡಿ ಆ ಮೂಲಕ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದಾನೆ. ಆದರೆ ಅವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿರಲಿಲ್ಲ. ಆಗಾಗ ಪತ್ನಿ ಜಗಳವಾಡುತ್ತಿದ್ದಳು. ಇದರಿಂದ ಬೇಸರಗೊಂಡ ಆತ ಪತ್ನಿಯನ್ನು ಹೊಡೆದು ಕೊಂದು ಅವಳ ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಹಣ್ಣಿನ ಬಂಡಿಯಲ್ಲಿ ಇಟ್ಟು ಖೇಡ್ ಬ್ರಾಮದಿಂದ ಅಹಮದಾಬಾದ್ ಗೆ ಕಾಲ್ನಡಿಗೆಯಲ್ಲಿ ಬಂದಿದ್ದಾನೆ.
ಈ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.