Publish Date: Sat, 27 Jan 2018 (11:20 IST)
Updated Date: Sat, 27 Jan 2018 (11:28 IST)
ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಅಶೋಕ ಚಕ್ರ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾವುಕರಾಗಿ ಕಣ್ಣಂಚನ್ನು ಒರೆಸಿಕೊಳ್ಳುವುದು ಕಂಡು ಬಂದಿದೆ.
ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರದಾನ ಮಾಡಲಾಯಿತು. ನಿರಾಲರ ಪತ್ನಿ ಹಾಗೂ ತಾಯಿಗೆ ಪ್ರಶಸ್ತಿಯನ್ನು ಹಸ್ತಾಂತರಿಸುವ ವೇಳೆ ರಾಷ್ಟ್ರಪತಿ ಕೋವಿಂದ್ ಅವರ ಕಣ್ಣಂಚು ತುಂಬಿಕೊಂಡವು. ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ತಮ್ಮ ಕಂಬನಿಯನ್ನು ಒರೆಸಿಕೊಂಡಿದ್ದು ಗೋಚರಿಸಿತು.
ವಾಯುಸೇನೆ ಗರುಡ ಕಮಾಂಡೋ ಆಗಿದ್ದ ಜ್ಯೋತಿ ಪ್ರಕಾಶ್ ನಿರಾಲ ಅವರು ಕಳೆದ ನವೆಂಬರ್‌ನಲ್ಲಿ ಬಂಡಿಪೋರಾದಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯುವ ವೇಳೆ ಹುತಾತ್ಮರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ