Publish Date: Sat, 27 Jan 2018 (09:34 IST)
Updated Date: Sat, 27 Jan 2018 (09:36 IST)
ನವದೆಹಲಿ: ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿಂದಿನ ಸಾಲಿನಲ್ಲಿ ಸೀಟು ನೀಡಿದ್ದನ್ನೇ ವಿವಾದ ಮಾಡುತ್ತಿರುವುದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದೆ.
‘ಕೇಂದ್ರ ಸರ್ಕಾರ ದುರಹಂಕಾರಿ ವ್ಯಕ್ತಿಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮೊದಲು ನಾಲ್ಕನೇ ಸಾಲಿನಲ್ಲಿ ಸೀಟು ನೀಡಿ ಕೊನೆಗೆ ಆರನೇ ಸಾಲಿನಲ್ಲಿ ಸೀಟು ನೀಡಿದರು. ಇದು ಕೇಂದ್ರದ ದುರಹಂಕಾರಕ್ಕೆ ಸಾಕ್ಷಿ. ಆದರೆ ನಮಗೆ ಗಣರಾಜ್ಯೋತ್ಸವವನ್ನು ಆಚರಿಸುವುದೇ ಎಲ್ಲಕ್ಕಿಂತ ದೊಡ್ಡ ಸಂಭ್ರಮ’ ಎಂದು ಕಾಂಗ್ರೆಸ್ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ‘ಅವರ ಕಾಲದ ಆಡಳಿತದಲ್ಲಿ ಪ್ರತಿಪಕ್ಷವಾಗಿದ್ದ ನಮಗೆ ವಿಐಪಿ ಏರಿಯಾದಲ್ಲಿ ಸ್ಥಾನವೇ ಸಿಗುತ್ತಿರಲಿಲ್ಲ. ಈಗ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಜೆಪಿ ಆಡಳಿತ ಸರ್ಕಾರ ವಿಶೇಷ ಸ್ಥಾನ ಮೀಸಲಿಟ್ಟಿತ್ತು. ಆದರೂ ಅದನ್ನೇ ದೊಡ್ಡ ವಿಷಯ ಮಾಡುತ್ತಿದೆ’ ಎಂದು ಬಿಜೆಪಿ ತಿರುಗೇಟು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ