Select Your Language

Notifications

webdunia
webdunia
webdunia
webdunia

ಹಜ್ ಯಾತ್ರೆಗೆ ಸಬ್ಸಿಡಿ ರದ್ದು-ಮುಕ್ತಾರ್ ಅಬ್ಬಾಸ್ ನಖ್ವಿ

ಹಜ್ ಯಾತ್ರೆಗೆ ಸಬ್ಸಿಡಿ ರದ್ದು-ಮುಕ್ತಾರ್ ಅಬ್ಬಾಸ್ ನಖ್ವಿ
ನವದೆಹಲಿ , ಬುಧವಾರ, 17 ಜನವರಿ 2018 (07:45 IST)
ನವದೆಹಲಿ : ಹಜ್ ಯಾತ್ರೆಗೆ ನೀಡುವ ಸಹಾಯಧನವನ್ನು ಈ ವರ್ಷದಿಂದ ನಿಷೇಧಿಸಲಾಗಿದೆ. ಯಾತ್ರಿಗಳು ಸ್ವಂತ ಖರ್ಚಿನಿಂದಲೇ ಯಾತ್ರೆ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.


ವಿಶೇಷವೆಂದರೆ ‘ಸಹಾಯಧನ ನೀಡದಿದ್ದರೂ ಭಾರತದಿಂದ ಈ ವರ್ಷ 1.75 ಲಕ್ಷ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಅಲ್ಪಸಂಖ್ಯಾಕರು ಘನತೆಯಿಂದ ಬದುಕಬೇಕು ಮತ್ತು ಯಾವುದೇ ಓಲೈಕೆಗೆ ಒಳಗಾಗಬಾರದು ಎಂಬ ಉದ್ದೇಶವೂ ಇದರಲ್ಲಿ ಸೇರಿದೆ ಎಂದಿದ್ದಾರೆ.


ಅಲ್ಲದೇ ಹಜ್ ಯಾತ್ರೆ ಕೈಗೊಳ್ಳಲು ಭಾರತದಿಂದ ಹಡಗುಗಳ ಮೂಲಕ ಬರುವ ಯಾತ್ರಿಗಳಿಗೂ ಪ್ರವೇಶಕ್ಕೆ ಅವಕಾಶ ನೀಡಲು ಸೌದಿ ಅರೇಬಿಯಾ ಸರ್ಕಾರ ಒಪ್ಪಿಕೊಂಡಿದೆ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 2012ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಹಜ್ ಯಾತ್ರೆಗೆ ಸಹಾಯಧನ ನೀಡುವುದನ್ನು ನಿಷೇಧಿಸಬೇಕು ಎಂದು ನಿರ್ದೇಶಿಸಿತ್ತು. ಹೊಸ ಸಮಿತಿಯ ಶಿಫಾರಸಿನಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊರಟಗೆರೆಯಲ್ಲಿ ಜಿ.ಪರಮೇಶ್ವರ್‌ ವಿರುದ್ಧ ಅಸಮಾಧಾನ