ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿರುವ ಸುಷ್ಮಾ ಸ್ವರಾಜ್

ಗುರುವಾರ, 21 ಡಿಸೆಂಬರ್ 2017 (21:19 IST)
ನವದೆಹಲಿ: ಭಾರತದಲ್ಲಿ ಚಿಕಿತ್ಸೆ ಪಡೆಯವ ಸಲುವಾಗಿ ಮೂರು ಪಾಕಿಸ್ತಾನಿ ಪ್ರಜೆಗಳು ಕೇಳಿದ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿರುವುದಾಗಿ ವಿದೇಶಿ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.


ಫಾತಿಮಾ ನಯೀಮ್, ಮನ್ಸೂರ್ ಬಗಾನಿ ಹಾಗು ಶೆಹಬ್ ಆಸಿಫ್ ಅವರು  ವೈದ್ಯಕೀಯ ವೀಸಾವನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಆಸಿಫ್ ಅವರಿಗೆ ಕರುಳು ಮರುಜೋಡಣೆಯ ಅಗತ್ಯವಿದ್ದು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಅವರ ವೀಸಾ ಮಂಜೂರಾಗಿರುವುದರ ಬಗ್ಗೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ


ಎರಡು ದೇಶಗಳ ಮಧ್ಯ ಬಿರುಕು ಮೂಡಿದ್ದರು ಸುಷ್ಮಾ ಸ್ವರಾಜ್ ಅವರು ಮಾತ್ರ ಮಾನವೀಯತೆ ದೃಷ್ಠಿಯಿಂದ ಸ್ಪಂದಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗುಜರಾತ್‌ ಚುನಾವಣೆ ಮತಗಳ ಎಣಿಕೆಯಲ್ಲಿ ದೋಷವಾಗಿದೆ ಎಂದ ಚುನಾವಣಾಧಿಕಾರಿ