Select Your Language

Notifications

webdunia
webdunia
webdunia
webdunia

ಹಜ್ ಯಾತ್ರೆಗೆ ಸಹಾಯಧನ ರದ್ದುಪಡಿಸಿದ ಕೇಂದ್ರ

ಹಜ್ ಯಾತ್ರೆಗೆ ಸಹಾಯಧನ ರದ್ದುಪಡಿಸಿದ ಕೇಂದ್ರ
ನವದೆಹಲಿ‌ , ಮಂಗಳವಾರ, 16 ಜನವರಿ 2018 (19:22 IST)
ಹಜ್ ಯಾತ್ರೆ ಮಾಡುವವರಿಗೆ ನೀಡುವ ಸಹಾಯಧನವನ್ನು ಪ್ರಸಕ್ತ ವರ್ಷದಿಂದ ರದ್ದುಪಡಿಸಲಾಗಿದೆ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್ ನಖ್ವಿ ಹೇಳಿದ್ದಾರೆ.
 
ಅಲ್ಪಸಂಖ್ಯಾತ ಬಾಲಕಿಯರ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಹಜ್‌ ಯಾತ್ರೆಯ ಸಹಾಯಧನದ ಹಣವನ್ನು ಬಳಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
 
ಹಜ್ ಯಾತ್ರೆಗೆ ಸಹಾಯಧನ ನೀಡುವುದನ್ನು ನಿಷೇಧಿಸಲು 2012ರಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಆದೇಶ ನೀಡಿತ್ತು. ಅದರಂತೆ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷ 1.75 ಲಕ್ಷ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದು ಈವರೆಗಿನ ದಾಖಲೆ ಆಗಿದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ವಿವಾದಲ್ಲಿ ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ– ಶೆಟ್ಟರ್