Select Your Language

Notifications

webdunia
webdunia
webdunia
webdunia

ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಬಿಡುಗಡೆ: ಮೋದಿ ಸರ್ಕಾರದಿಂದ ಬಡವರಿಗೆ ಗಿಫ್ಟ್

PM Swanidhi Credit card
Photo Credit: X
ನವದೆಹಲಿ: ಪ್ರಧಾನಿ ಮೋದಿ ನಿನ್ನೆ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
 

ನಿನ್ನೆ ಪ್ರಧಾನಿ ಮೋದಿ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ಯುಪಿಐಗೆ ಲಿಂಕ್ ಮಾಡಬಹುದಾಗಿದೆ. ಇದು ಯುಪಿಐ ಸಂಯೋಜಿತ ಬಡ್ಡಿರಹಿತ ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯವಾಗಿದೆ. ಇದರಿಂದ ಬೀದಿ ವ್ಯಾಪಾರಿಗಳು, ಪಾದಚಾರಿ ಮಾರ್ಗ ಮಾರಾಟಗಾರರಿಗೆ ಅನುಕೂಲವಾಗಲಿದೆ.

 
ಪಿಎಂ ಸ್ವಾನಿಧಿ ಕ್ರೆಡಿಟ್ ಕಾರ್ಡ್ ಯಾರಿಗೆ ಅನುಕೂಲ?

ಈ ಕ್ರೆಡಿಟ್ ಕಾರ್ಡ್ ಮೊದಲ ಎರಡು ಪಿಎಂ ಸ್ವಾನಿಧಿ ಸಾಲಗಳನ್ನು ಯಶಸ್ವಿಯಾಗಿ ಮರುಪಾವತಿಸಿದ ಬೀದಿ ವ್ಯಾಪಾರಿಗಳಿಗೆ ಲಭ್ಯವಿರುವ ಉತ್ತಮ ಕ್ರೆಡಿಟ್ ಕಾರ್ಡ್ ಆಗಿದೆ. ಇದರ ಪ್ರಾರಂಭಿಕ ಮಿತಿ 10,000 ಮತ್ತು ನಂತರ 30,000 ಕ್ಕೆ ಏರಿಕೆಯಾಗುತ್ತದೆ. ಇದಕ್ಕೆ 5 ವರ್ಷಗಳ ಮಾನ್ಯತೆಯಿರುತ್ತದೆ. ಇದು ರಿವಾಲ್ವಿಂಗ್ ಕ್ರೆಡಿಟ್ ಒದಗಿಸುವ ಮೂಲಕ ಮೈಕ್ರೋ ಕ್ರೆಡಿಟ್ ಯೋಜನೆಯನ್ನು ಉತ್ತೇಜಿಸುತ್ತದೆ.

ಈ ಕ್ರೆಡಿಟ್ ಕಾರ್ಡ್ ಗಳನ್ನು ಬ್ಯಾಂಕ್ ಗಳಿಂದ ಪಡೆಯಬಹುದು. ಬೀದಿ ಬದಿ ವ್ಯಾಪಾರಿಗಳು ಈ ಕಾರ್ಡ್ ನ ಲಾಭ ಪಡೆಯಬಹುದು.

2020 ರಲ್ಲಿ ಮೋದಿ ಸರ್ಕಾರ ಬೀದಿ ವ್ಯಾಪಾರಿಗಳ ಅನುಕೂಲಕ್ಕೆ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಎಂಬ ಕಿರು ಸಾಲ  ಯೋಜನೆಯನ್ನು ಜಾರಿಗೆ ತಂದಿತ್ತು. ಅದರ ಮುಂದುವರಿದ ರೂಪ ಇದಾಗಿದೆ. ಈ ಯೋಜನೆಯಡಿ 10,000 ರೂ.ಗಳ ಕಾರ್ಯನಿರತ ಬಂಡವಾಳದ ಯಾವುದೇ ಶ್ಯೂರಿಟಿ ಇಲ್ಲದೇ ಸಾಲ ನೀಡುತ್ತದೆ. 20,000 ರೂ.ಗಳಿಂದ 50,000 ರೂ.ಗಳವರೆಗೆ ಶೇ.7 ರಷ್ಟು ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೂಲಕ ಬೀದಿ ವ್ಯಾಪಾರಿಗಳಲ್ಲಿ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಆರಂಭಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ವಾರಂತ್ಯದಲ್ಲಿ ಈ ಜಿಲ್ಲೆಗಳಿಗೆ ಮಳೆ ಸೂಚನೆ