Publish Date: Mon, 29 Dec 2025 (11:11 IST)
Updated Date: Mon, 29 Dec 2025 (11:14 IST)
ಬೆಂಗಳೂರು: ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳಲ್ಲಿ ಅಟಲ್ ಪೆನ್ಷನ್ ಯೋಜನೆಯೂ ಒಂದು. ವೃದ್ಧಾಪ್ಯ ವೇತನ ನೀಡುವ ಈ ಯೋಜನೆ ಭಾರತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಯಾರು ಅರ್ಜಿ ಸಲ್ಲಿಸಬಹುದು, ಎಲ್ಲಿ ಅರ್ಜಿ ಸಲ್ಲಿಸಬೇಕು ಇಲ್ಲಿದೆ ವಿವರ.
ಭಾರತ ಸರ್ಕಾರದ ಒಂದು ಸಾಮಾಜಿಕ ಭದ್ರತೆ ಸ್ಕೀಮ್ ಇದಾಗಿದೆ. 18-40 ವರ್ಷದಗೊಳಗಿನ ಎಲ್ಲಾ ಭಾರತದ ಪ್ರಜೆಗಳಿಗೆ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ಇದು ಲಭ್ಯವಿರುತ್ತದೆ. 60 ವರ್ಷದ ನಂತರ ಕನಿಷ್ಠ 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ಸಿಗುತ್ತದೆ. ಒಂದು ವೇಳೆ ಖಾತೆದಾರ ನಿಧನರಾದರೆ ಅವರ ನಾಮಿನಿಗೆ ಪಿಂಚಣಿ ಸಿಗುತ್ತದೆ.
ಯಾರು ಅರ್ಹರು: 18-40 ವರ್ಷದೊಳಗಿನ ಬ್ಯಾಂಕ್ ಖಾತೆದಾರರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಆದಾಯ ತೆರಿಗೆ ಪಾವತಿಸುವವರು ಆಗಿರಬಾರದು.
ಏನು ಮತ್ತು ಯಾರಿಗೆ ಪಿಂಚಣಿ ಸಿಗುತ್ತದೆ: ಖಾತ್ರಿ ಪಡಿಸಿದ ಮೊತ್ತ 1,000 ರೂ.ನಿಂದ 5,000 ರೂ.ವರೆಗೆ ಖಾತೆದಾರರಿಗೆ 60 ವರ್ಷದ ಬಳಿಕ ಸಿಗುತ್ತದೆ. ಒಂದು ವೇಳೆ ಖಾತೆದಾರರು ನಿಧನರಾದರೆ ಅವರ ಸಂಗಾತಿಗೆ, ಸಂಗಾತಿ ಮರಣ ಹೊಂದಿದ್ದರೆ ಅವರ ಮಕ್ಕಳಿಗೆ ಅಥವಾ ಯಾರನ್ನು ನಾಮಿನಿ ಮಾಡಿರುತ್ತಾರೋ ಅವರಿಗೆ ಸಿಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?: ನಿಮ್ಮ ಬ್ಯಾಂಕ್ ಖಾತೆ ಇರುವ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ಎನ್ ಪಿಎಸ್ ಪೋರ್ಟಲ್ ಮೂಲಕ ಆನ್ ಲೈನ್ ಆಗಿ ಸಲ್ಲಿಸಬಹುದು. ಇದಕ್ಕೆ ಆಧಾರ್ ಸಂಖ್ಯೆ ನೀಡಬೇಕಾಗುತ್ತದೆ. ಪ್ರತೀ ತಿಂಗಳು 40 ವರ್ಷದವರೆಗೆ ನಿಮ್ಮ ಖಾತೆಯಿಂದ ಸ್ವಯಂ ಚಾಲಿತವಾಗಿ ನಿಗದಿತ ಮೊತ್ತ ಕಡಿತವಾಗುತ್ತದೆ.