Select Your Language

Notifications

webdunia
webdunia
webdunia
webdunia

ಗಮನಿಸಿ: MGNREGA ಯೋಜನೆಗೆ ದೊಡ್ಡ ಬದಲಾವಣೆ ತಂದ ಕೇಂದ್ರ ಸರ್ಕಾರ, ಕಾರ್ಮಿಕರಿಗೆ ಗುಡ್ ನ್ಯೂಸ್

MGNREGA
Photo Credit: X
ನವದೆಹಲಿ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮನ್ರೇಗಾ ಯೋಜನೆಗೆ ತಿದ್ದುಪಡಿ ತಂದಿದ್ದು, ಈ ಬದಲಾವಣೆಯಿಂದ ಕಾರ್ಮಿಕರಿಗೆ ಲಾಭವಾಗಲಿದೆ. ಬದಲಾವಣೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಮತ್ತು ಕನಿಷ್ಠ ವೇತನ ಖಾತ್ರಿಗೊಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಕೇಂದ್ರ ಸರ್ಕಾರದ ಯೋಜನೆಯಿದು. ಹಲವು ವರ್ಷಗಳಿಂದ ಈ ಯೋಜನೆ ಜಾರಿಯಲ್ಲಿದೆ. ಆದರೆ ಈಗ ಯೋಜನೆ ಹೆಸರು ಬದಲಾಯಿಸಲಾಗಿದೆ.

ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಮನ್ರೇಗಾ ಯೋಜನೆ ಹೆಸರು ಬದಲಾಯಿಸಲು ತೀರ್ಮಾನಿಸಲಾಯಿತು. ಇದಕ್ಕೆ ಕೇಂದ್ರ ಸಂಪುಟ ಅಸ್ತು ಎಂದಿದೆ. ಇನ್ನು ಮುಂದೆ ಮನ್ರೇಗಾ ಯೋಜನೆಯನ್ನು ಪೂಜ್ಯ ಬಾಪು ಗ್ರಾಮೀಣ ರೋಝ್ ಗಾರ್ ಗ್ಯಾರಂಟಿ ಯೋಜನೆ ಎಂದು ಕರೆಯಲಾಗುತ್ತದೆ.

ಈ ಯೋಜನೆಯಲ್ಲಿ ಇದುವರೆಗೆ ಕನಿಷ್ಠ ಉದ್ಯೋಗ ದಿನಗಳ ಸಂಖ್ಯೆ 125 ಆಗಿತ್ತು. ಆದರೆ ಈಗ ಕನಿಷ್ಠ ವೇತನ ದಿನಕ್ಕೆ 240 ರೂ.ಗೆ ಹೆಚ್ಚಿಸಲಾಗಿದೆ.  ಇದರಿಂದ ಕಾರ್ಮಿಕರಿಗೆ ಅನುಕೂಲವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲಿ ಯತೀಂದ್ರನಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯನಾ