ನವದೆಹಲಿ: ಮತಗಳ್ಳತನದ ಬಗ್ಗೆ ಚರ್ಚೆಗೆ ಬನ್ನಿ ಎಂದು ಗೃಹಸಚಿವ ಅಮಿತ್ ಶಾಗೆ ಸಂಸತ್ ನಲ್ಲೇ ಸವಾಲು ಹಾಕಿ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಹೋದರೆ ಹೇಗೆ ಎಂದು ಬಿಜೆಪಿ ಬೆಂಬಲಿಗರು ಟ್ರೋಲ್ ಮಾಡಿದ್ದಾರೆ.
ನಿನ್ನೆ ಸಂಸತ್ ನಲ್ಲಿ ಗೃಹ ಸಚಿವ ಅಮಿತ್ ಶಾ ಮಾತನಾಡುವಾಗ ಮಧ್ಯಪ್ರವೇಶಿಸಿದ್ದ ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ. ಮೂರು ಪತ್ರಿಕಾಗೋಷ್ಠಿಗಳನ್ನು ಮಾಡಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದರು.
ಇದರ ನಡುವೆ ರಾಹುಲ್ ಗಾಂಧಿ ಸಂಸತ್ ನಡೆಯುವಾಗಲೇ ಜರ್ಮನಿ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಡಿಸೆಂಬರ್ 15 ರಿಂದ 20 ರವರೆಗೆ ಐದು ದಿನಗಳ ಕಾಲ ಅವರು ಜರ್ಮನಿ ಪ್ರವಾಸ ಮಾಡಲಿದ್ದಾರೆ. ಈ ವಿಚಾರವಾಗಿ ಬಿಜೆಪಿ ಭಾರೀ ಟೀಕೆ ಮಾಡಿದೆ.
ಅಮಿತ್ ಶಾಗೆ ಸವಾಲು ಹಾಕೋದೇನೋ ಹಾಕಿದ್ರು. ಅದನ್ನು ನೆರವೇರಿಸುವ ಮೊದಲೇ ಅವರೇ ವಿದೇಶಕ್ಕೆ ಓಡಿ ಹೋಗ್ತಿದ್ದಾರೆ. ಹಾಗಿದ್ರೆ ಸವಾಲು ಯಾಕೆ ಹಾಕಿದ್ರು. ಸವಾಲು ಹಾಕಿದವರಿಗೇ ಸವಾಲು ಎದುರಿಸುವ ಧೈರ್ಯವಿಲ್ಲ ಎಂದು ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದ್ದಾರೆ.