Publish Date: Thu, 11 Dec 2025 (08:55 IST)
Updated Date: Thu, 11 Dec 2025 (08:58 IST)
ಬೆಂಗಳೂರು: ರಾಜ್ಯದಲ್ಲಿ ಇದೀಗ ಬಹುತೇಕ ಕಡೆ ಭಾರೀ ಚಳಿಯ ವಾತಾವರಣವಿದೆ. ಇಂದು ತಾಪಮಾನದಲ್ಲಿ ಮತ್ತಷ್ಟು ಇಳಿಕೆಯಾಗಲಿದ್ದು ಇಂದಿನ ಹವಾಮಾನ ವರದಿ ಇಲ್ಲಿದೆ ಗಮನಿಸಿ.
ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಈಗಾಗಲೇ ಭಾರೀ ಕುಸಿತವಾಗಿದೆ. ವಾರಂತ್ಯದ ವೇಳೆಗೆ ಇನ್ನಷ್ಟು ಚಳಿ ಹೆಚ್ಚಾಗುವ ನಿರೀಕ್ಷೆಯಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಳಿ ಮತ್ತಷ್ಟು ಹೆಚ್ಚಾಗಲಿದೆ.
ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ತಾಪಮಾನ ಸರಾಸರಿ 12-13 ಡಿಗ್ರಿಯಷ್ಟಿರಲಿದ್ದು ವಿಪರೀತ ಚಳಿ ಕಂಡುಬರಲಿದೆ.
ಮೈಸೂರು, ಮಂಡ್ಯ, ಬೆಂಗಳೂರು, ಚಾಮರಾಜನಗರ, ಕೋಲಾರ, ತುಮಕೂರುಹಾವೇರಿ, ರಾಚಯೂರು, ವಿಜಯಪುರ, ಕಲಬುರಗಿ, ಯಾದಗಿರಿ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳಲ್ಲಿಕನಿಷ್ಠ ತಾಪಮಾನ 14-16 ಡಿಗ್ರಿಯಷ್ಟಿರಲಿದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿಯಲ್ಲಿ 20-22 ಡಿಗ್ರಿಯೊಳಗಿರಲಿದೆ.