Select Your Language

Notifications

webdunia
webdunia
webdunia
webdunia

ಇಡಿ ದಾಳಿ ಮಾಡಿ ವಶಪಡಿಸಿಕೊಳ್ಳುವ ಹಣ ಏನಾಗುತ್ತದೆ? ಯಾರಿಗೆ ಸೇರುತ್ತದೆ?

ಇಡಿ ದಾಳಿ ಮಾಡಿ ವಶಪಡಿಸಿಕೊಳ್ಳುವ ಹಣ ಏನಾಗುತ್ತದೆ? ಯಾರಿಗೆ ಸೇರುತ್ತದೆ?
ನವದೆಹಲಿ , ಬುಧವಾರ, 14 ಸೆಪ್ಟಂಬರ್ 2022 (09:10 IST)
ನವದೆಹಲಿ: ಭ್ರಷ್ಟರ ಮನೆ ಮೇಲೆ ದಾಳಿ ನಡೆಸಿ ಜಾರಿ ನಿರ್ದೇಶನಾಲಯ (ಇಡಿ) ಕೋಟಿ ಕೋಟಿ ಹಣದ ಕಂತೆ ವಶಪಡಿಸಿಕೊಂಡ ಸುದ್ದಿ ಕೇಳುತ್ತೇವೆ. ಆದರೆ ಈ ಹಣ ಕೊನೆಗೆ ಎಲ್ಲಿ ಸೇರುತ್ತದೆ ಎಂದು ನಿಮಗೆ ಗೊತ್ತಾ?

ಭ್ರಷ್ಟರ ಮನೆಯಿಂದ ವಶಪಡಿಸಿಕೊಳ್ಳಲಾಗುವ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿನಿಧಿಗಳು ಬಂದು ಮೆಷಿನ್ ಮೂಲಕ ಹಣ ಎಣಿಕೆ ಮಾಡುತ್ತಾರೆ. ಬಳಿಕ ಈ ಹಣಕ್ಕೆ ನ್ಯಾಯಯುತವಾದ ದಾಖಲೆಗಳಿವೆಯೇ ಎಂದು ಭ್ರಷ್ಟರಲ್ಲಿ ಕೇಳಲಾಗುತ್ತದೆ. ಒಂದು ವೇಳೆ ಅವರು ದಾಖಲೆ ಕೊಡಲು ವಿಫಲರಾದರೆ ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಡಿ ಹೆಸರಿನ ಖಾತೆಯಲ್ಲಿ ಜಮಾ ಮಾಡಿಕೊಳ್ಳುತ್ತದೆ.

ಬಳಿಕ ಆರೋಪಿಯ ವಿಚಾರಣೆ ನಡೆಸಿ ಆತ ತಪ್ಪಿತಸ್ಥನೆಂದು ಸಾಬೀತಾದರೆ ಈ ಹಣವೆಲ್ಲಾ ಇಡಿ ಅರ್ಥಾತ್ ಕೇಂದ್ರ ಸರ್ಕಾರಕ್ಕೆ ಜಮೆಯಾಗುತ್ತದೆ. ಒಂದು ವೇಳೆ ಆರೋಪಿ ಆರೋಪದಿಂದ ಮುಕ್ತನಾದರೆ ಆ ಹಣವೆಲ್ಲಾ ಮತ್ತೆ ಆತನಿಗೆ ಮರಳಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿದ!