ಟೆಕ್ಸಾಸ್: ಭಾರತೀಯ ಮೂಲದ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ, ಭಾರತಕ್ಕೆ ವಾಪಸ್ ಹೋಗಿ ಎಂದು ಜನಾಂಗೀಯವಾಗಿ ನಿಂದನೆ ಮಾಡಿದ ಟೆಕ್ಸಾಸ್ ಮಹಿಳೆಯನ್ನು ಬಂಧಿಸಲಾಗಿದೆ.
ರೆಸ್ಟೋರೆಂಟ್ ಒಂದರ ಮುಂದೆ ನಿಂತಿದ್ದ ಭಾರತೀಯ ಮಹಿಳೆಯರಿಗೆ ವಿದೇಶೀ ಮಹಿಳೆ ಅವಾಚ್ಯವಾಗಿ ನಿಂದಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಮಹಿಳೆಯನ್ನು ಬಂಧಿಸಿರುವ ಪೊಲೀಸರು ಜನಾಂಗೀಯ ನಿಂದನೆ, ಬೆದರಿಕೆ, ಹಲ್ಲೆ ಕೇಸ್ ದಾಖಲಿಸಿದ್ದಾರೆ. ಈಕೆಯನ್ನು ಎಸ್ಮೆರಾಲ್ಡಾ ಆಪ್ಟನ್ ಎಂದು ಗುರುತಿಸಲಾಗಿದೆ.