Select Your Language

Notifications

webdunia
webdunia
webdunia
webdunia

ಲಕ್ವ ಹೊಡೆದ 80 ವರ್ಷದ ಮುದುಕಿಯನ್ನೂ ಬಿಡದ ಕಾಮುಕ!

ಅತ್ಯಾಚಾರ
ಮುಂಬೈ: ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಅದು ಈ ಯುವಕನ ವಿಚಾರದಲ್ಲಿ ನಿಜವಾಗಿದೆ. 80 ವರ್ಷದ ಪ್ಯಾರಾಲಿಸಿಸ್ ಆದ ಅಜ್ಜಿಯ ಮೇಲೆ 26 ವರ್ಷದ ಯುವಕನೋರ್ವ ಕಾಮತೃಷೆ ತೀರಿಸಿಕೊಂಡಿದ್ದಾನೆ.

ಈ ಸಂಬಂಧ ಆತನಿಗೆ ಕೋರ್ಟ್ ಜಾಮೀನು ನೀಡಲೂ ನಿರಾಕರಿಸಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಆದರೆ ಆರೋಪಿ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮತ್ತು ಸಂತ್ರಸ್ತ ವೃದ್ಧೆಯ ಕುಟುಂಬಸ್ಥರ ನಡುವೆ ಹಣಕಾಸಿನ ಪರಿಹಾರ ನೀಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಬೇಕೆಂದು ಮನವಿ ಸಲ್ಲಿಸಿದ್ದರು.

ಆದರೆ ಕೋರ್ಟ್ ಇದಕ್ಕೆ ಒಪ್ಪಿಲ್ಲ. ಇದು ಮಹಿಳೆಯ ಮಾನದ ಪ್ರಶ್ನೆ. ಹೀಗಾಗಿ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ!