Publish Date: Wed, 14 Sep 2022 (08:38 IST)
Updated Date: Tue, 13 Sep 2022 (21:16 IST)
ಕೊಪ್ಪಳ : ಅಪ್ರಾಪ್ತ ಬಾಲಕಿಯನ್ನು ವಿವಾಹಿತನೋರ್ವ ಕಿಡ್ನ್ಯಾಪ್ ಮಾಡಿ, ಅತ್ಯಾಚಾರವನ್ನು ಮಾಡಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳದ ಗಂಗಾವತಿಯ ಎಚ್ಆರ್ಎಸ್ ಕಾಲೋನಿಯ ನಿವಾಸಿ ಹುಲ್ಲೇಶ್ ಕಜ್ಜಿ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ನಗರದ ಖಾಸಗಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಹುಲ್ಲೇಶ್ ಕಜ್ಜಿ ಪ್ರತಿನಿತ್ಯ ಬಾಲಕಿಯನ್ನು ಚುಡಾಯಿಸುವುದು, ರಸ್ತೆಗೆ ಅಡ್ಡ ನಿಂತು ಮಾತನಾಡಿಸುವುದು ಮಾಡುತ್ತಿದ್ದನು. ಸೆ.7ರಂದು ಬಾಲಕಿಯು ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಮಾವನ ಸಹಾಯದಿಂದ ಹುಲ್ಲೇಶ್ ಬೈಕ್ನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ.
ಗಂಗಾವತಿ ಹೊರವಲಯದ ಸಿದ್ದಿಕೇರಿ ಸಮೀಪದ ವಾಣಿಭದ್ರೇಶ್ವರ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಕರೆದುಕೊಂಡು ಹೋಗಿ, ಅಲ್ಲಿ ಹುಲ್ಲೇಶ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಎರಡು ದಿನಗಳ ಕಾಲ ಅಲ್ಲಿಯೇ ಇದ್ದಿದ್ದು ಸೆ. 9ರಂದು ಬಾಲಕಿಯನ್ನು ಗಂಗಾವತಿ ನಗರದ ಬಸ್ ನಿಲ್ದಾಣ ಬಳಿ ಬಿಟ್ಟು ಹೋಗಲಾಗಿದೆ. ನಂತರ ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಮನೆಗೆ ಹೋಗಿ ಮಾಹಿತಿ ನೀಡಿದ್ದಾಳೆ.