ಬೀದರ್ : ಅಪ್ರಾಪ್ತ ಸಹೋದರಿ ಮೇಲೆ ಸಹೋದರನೇ ಅತ್ಯಾಚಾರ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಾಂಡಯೊಂದರಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿಯ ತಂದೆಗೆ ಇಬ್ಬರು ಪತ್ನಿಯರಿದ್ದು, ಹಿರಿಯ ಪತ್ನಿಯ ಮಗನಿಂದ ಕಿರಿಯ ಪತ್ನಿಯ ಮಗಳ ಮೇಲೆ ಅತ್ಯಾಚಾರ ಮಾಡಲಾಗಿದೆ.
ಮೊದಲನೇಯ ಪತ್ನಿ ಮಗ ಆಗಾಗ ಕೆಲಸಕ್ಕೆಂದು ತನ್ನ ಮನೆಗೆ ಸಹೋದರಿಯನ್ನು ಕರೆದುಕೊಂಡು ಹೋಗುತ್ತಿದ್ದನು. ಈ ವೇಳೆ ಸಹೋದರಿ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗುತ್ತಿದ್ದಂತೆ ಅತ್ಯಾಚಾರ ಮಾಡಿದ ಸಹೋದರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.