Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಯ ಹಣಕ್ಕೆ ಮಾರಾಟ, ಒಂದು ವರ್ಷ ನಿರಂತರ ಅತ್ಯಾಚಾರ

webdunia
ಲಕ್ನೋ , ಶನಿವಾರ, 27 ಆಗಸ್ಟ್ 2022 (09:30 IST)
ಲಕ್ನೋ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಹಣಕ್ಕಾಗಿ ಮಾರಾಟ ಮಾಡಲಾಗಿತ್ತು. ಖರೀದಿ ಮಾಡಿದ ವ್ಯಕ್ತಿ ಆಕೆಗೆ ಡ್ರಗ್ ನೀಡಿ ನಿರಂತರ ಒಂದು ವರ್ಷ ಕಾಲ ಅತ್ಯಾಚಾರ ನಡೆಸಿದ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಛತ್ತೀಸ್ ಘಡ ಮೂಲದ ಬಾಲಕಿ ಸ್ನೇಹಿತೆಯ ಸಹಾಯದಿಂದ ಕೆಲಸ ಹುಡುಕಿಕೊಂಡು ಮಥುರಾಗೆ ಬಂದಿದ್ದಳು. ಅಲ್ಲಿ ಸ್ನೇಹಿತೆಯ ಸಂಬಂಧಿ ಮಹಿಳೆಯೊಬ್ಬಳು ಆಕೆಯನ್ನು ಪರಿಚಯಮಾಡಿಕೊಂಡು ವಿಶ್ವಾಸ ಗಳಿಸಿದ್ದಳು. ಆಕೆ ಇನ್ನಿತರ ಇಬ್ಬರು ವ್ಯಕ್ತಿಗಳಿಗೆ ಆಕೆಯನ್ನು ಪರಿಚಯಿಸಿದ್ದಳು.

ಅವರ ಸಹಾಯದೊಂದಿಗೆ ಮಹಿಳೆ ಬಾಲಕಿಯನ್ನು 80 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಬಳಿಕ ಬಲವಂತವಾಗಿ ಮದುವೆ ಮಾಡಿಸಿ ಆಕೆಗೆ ಡ್ರಗ್ಸ್ ನೀಡಿ ನಿರಂತರವಾಗಿ ಅತ್ಯಾಚಾರವೆಸಗಲಾಗಿದೆ. ಈ ಸಂಬಂಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಬಾಲಕಿಯನ್ನು ಈಗ ರಕ್ಷಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಂದ ಪಾಪಿ ಮಗ!